Advertisement

48,268 ಹೊಸ ಕೋವಿಡ್ ಪ್ರಕರಣಗಳು: 81 ಲಕ್ಷ ಮೀರಿದ ದೇಶದ ಕೋವಿಡ್ ಪ್ರಕರಣಗಳ ಸಂಖ್ಯೆ

03:39 PM Oct 31, 2020 | keerthan |

ಹೊಸದಿಲ್ಲಿ: ಭಾರತದಲ್ಲಿ ಶುಕ್ರವಾರ 48,268 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ದೇಶದ ಒಟ್ಟು ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ 81,37,119ಕ್ಕೆ ಏರಿಕೆಯಾಗಿದೆ.

Advertisement

ಶುಕ್ರವಾರ ದೇಶದಲ್ಲಿ 551 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಇದರಿಂದ ಇದುವರೆಗೆ ಮೃತಪಟ್ಟ ಕೋವಿಡ್ 19 ಸೋಂಕಿತರ ಸಂಖ್ಯೆ 1,21,641ಕ್ಕೆ ಏರಿಕೆಯಾಗಿದೆ.

ಶುಕ್ರವಾರ 59,454 ಮಂದಿ ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 74,32,829 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 5,82,649 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:ಕೋವಿಡ್ ಲಸಿಕೆ ವಿತರಣೆಗೆ ಸಮಿತಿ ರಚಿಸಿ: ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆ ಆಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹಾಗೆಯೇ ಸೋಂಕಿತರ ಸಂಖ್ಯೆಯೂ ಇಳಿಕೆ ಆಗಿದೆ. ಶುಕ್ರವಾರ 5,788 ಮಂದಿ ಆಸ್ಪತ್ರೆ ಮತ್ತು ಆರೈಕೆ ಕೇಂದ್ರಗಳಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಬಿಡುಗಡೆ ಆದವರ ಸಂಖ್ಯೆ ಈಗ 2,93,466ಕ್ಕೆ ಏರಿದೆ.

Advertisement

ಜತೆಗೆ 1,811 ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸಂಖ್ಯೆ 3,34,848 ಕ್ಕೆ ಏರಿಕೆಯಾಗಿ 27 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3,847ಕ್ಕೆ ಏರಿದೆ. ನಗರದಲ್ಲಿ ಪ್ರಸ್ತುತ 37,534 ಸಕ್ರಿಯ ಪ್ರಕರಣಗಳಿದ್ದು, 10 ಮಂದಿ ನಿಗಾ ಘಟಕದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next