Advertisement

4.8 ಲಕ್ಷ ಹಣ, ಮೊಬೈಲ್ ದರೋಡೆ

06:50 AM Jan 10, 2019 | Team Udayavani |

ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ದುಷ್ಕರ್ಮಿಗಳು 4.80 ಲಕ್ಷ ನಗದು ಹಾಗೂ ಪ್ರಯಾಣಿಕರ ಬಳಿಯಿದ್ದ ಮೊಬೈಲ್‌ ಕಸಿದು ಪರಾರಿಯಾಗಿದ್ದಾರೆ.

Advertisement

ಜಯನಗರದ ಬಿಎಸ್‌ಕೆ ಬಸ್‌ನಿಲ್ದಾಣ ಮುಂಭಾಗ ಬುಧವಾರ ಮುಂಜಾನೆ ಓಲಾಕ್ಯಾಬ್‌ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು, ಚಾಲಕ ಹಾಗೂ ಇಬ್ಬರು ಪ್ರಯಾಣಿಕರ ಬಳಿ ಮೊಬೈಲ್‌ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಈ ಕುರಿತು ಕ್ಯಾಬ್‌ ಚಾಲಕ ಸಂತೋಷ್‌ ಎಂಬಾತ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಠಾಣೆ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

ಚಾಲಕ ಸಂತೋಷ್‌, ಬುಧವಾರ ಮುಂಜಾನೆ 2.30ರ ಸುಮಾರಿಗೆ ಬಸ್‌ನಿಲ್ದಾಣದಲ್ಲಿ ಖಾಸಗಿ ಕಂಪನಿಯ ಉದ್ಯೋಗಿಗಳಾದ ಕೌಶಿಕ್‌ ಹಾಗೂ ಜಯಂತ್‌ ಎಂಬುವವರು ಕ್ಯಾಬ್‌ ಹತ್ತಿಸಿಕೊಂಡಿದ್ದಾರೆ. ಸ್ವಲ್ಪ ದೂರ ಪ್ರಯಾಣಿಸುತ್ತಲೇ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕ್ಯಾಬ್‌ ಅಡ್ಡಗಟ್ಟಿ, ಚಾಕು ತೋರಿಸಿ ಮೂವರ ಬಳಿಯೂ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳ ಸುಳಿವು ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದರು.

4.80 ಲಕ್ಷ ರೂ.ದರೋಡೆ
ಮತ್ತೂಂದು ಪ್ರಕರಣದಲ್ಲಿ ಜಯನಗರ ನಾಲ್ಕನೇ ಬ್ಲಾಕ್‌ನ 15ನೇ ಕ್ರಾಸ್‌ನಲ್ಲಿ ರಸ್ತೆಬದಿ ನಿಲ್ಲಿಸಿದ್ದ ಹೋಂಡಾ ಆ್ಯಕ್ಟೀವಾ ಡಿಕ್ಕಿ ಹೊಡೆದಿರುವ ದುಷ್ಕರ್ಮಿಗಳು 4.80 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಜ.7ರಂದು ಮಧ್ಯಾಹ್ನ ನಡೆದಿದೆ. ಹಣಕಳೆದುಕೊಂಡಿರುವ ಧರ್ಮೇಂದ್ರ ಸಿಂಗ್‌ ಎಂಬುವವರು ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳಗ್ಗೆ ಬ್ಯಾಂಕ್‌ನಿಂದ ಪಡೆದುಕೊಂಡ ಹಣವನ್ನು ವಾಹನದ ಡಿಕ್ಕಿಯಲ್ಲಿಟ್ಟಿದ್ದೆ. ಮಧ್ಯಾಹ್ನ 1.30ರ ಸುಮಾರಿಗೆ ಸ್ನೇಹಿತನ ಜತೆ ಎಸ್‌ಎಲ್‌ವಿ ಹೋಟೆಲ್‌ನ ಊಟ ಮುಗಿಸಿಕೊಂಡು ರಸ್ತೆ ಬದಿ ನಿಲ್ಲಿಸಿದ್ದ ವಾಹನದ ಬಳಿ ಬರುವಷ್ಟರಲ್ಲಿ ದುಷ್ಕರ್ಮಿಗಳು ಹಣ ಕದ್ದೊಯ್ದಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next