Advertisement

ಆತ್ಮನಿರ್ಭರ ಯೋಜನೆಯಲ್ಲಿ ರಾಜ್ಯಕ್ಕೆ 4,750 ಕೋ.ರೂ.

10:41 PM Nov 15, 2020 | mahesh |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಆತ್ಮನಿರ್ಭರ ಭಾರತ್‌ ಪ್ಯಾಕೇಜ್‌ ಅಡಿಯಲ್ಲಿ ರಾಜ್ಯದ ಸಹಕಾರ ಕ್ಷೇತ್ರಕ್ಕೆ 4,750 ಕೋಟಿ ರೂ. ಮೀಸಲಿಟ್ಟಿದ್ದು, ಮೊದಲ ಹಂತದಲ್ಲಿ 600 ಕೋಟಿ ರೂ. ಬಿಡುಗಡೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರೀತಿ ಪ್ರಸ್ತಾವನೆ ಸಲ್ಲಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಹೇಳಿದರು.

Advertisement

67ನೇ ಅಖೀಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಮಂಗಳೂರಿನ ಟಿ.ವಿ. ರಮಣ ಪೈ ಹಾಲ್‌ನಲ್ಲಿ ರವಿವಾರ ನಡೆದ ರಾಜ್ಯ ಮಟ್ಟದ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಗಳು ಮತ್ತು ಅಪೆಕ್ಸ್‌ ಬ್ಯಾಂಕ್‌ಗಳ ಮೂಲಕ ರಾಜ್ಯದ 24.5 ಲಕ್ಷ ರೈತರಿಗೆ 15,300 ಕೋಟಿ ರೂ. ಕೃಷಿ ಸಾಲ ವಿತರಿಸಲು ಉದ್ದೇಶಿಸಿದ್ದು, ಈಗಾ ಗಲೇ 10,000 ಕೋಟಿ ರೂ.ಗಳನ್ನು ರೈತರಿಗೆ ಶೂನ್ಯ ಮತ್ತು ಶೇ. 3ರ ಬಡ್ಡಿದರದಲ್ಲಿ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಸಹಕಾರ ಅಧ್ಯಯನ ಪೀಠ
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಪ್ರಸ್ತಾವನೆಗೈದು, ಮಂಗಳೂರು ವಿ.ವಿ.ಯಲ್ಲಿ ಸಹಕಾರ ಅಧ್ಯಯನ ಪೀಠ ಸ್ಥಾಪನೆ ಕುರಿತು ಕಳೆದ ವರ್ಷವೇ ಕುಲಪತಿ ಜತೆ ಮಾತನಾಡಿದ್ದು ಸಮ್ಮತಿಸಿದ್ದಾರೆ. ಈ ಬಾರಿ ಕಾರ್ಯಗತ ಗೊಳಿಸಲು ಪ್ರಯತ್ನಿಸಲಾಗುವುದು. ದ.ಕ. ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳು ಅತ್ಯುತ್ತಮ ಕಾರ್ಯವೈಖರಿ ಯಿಂದ ಹೆಸರು ಪಡೆದಿವೆ. ಹಲವಾರು ಜನರಿಗೆ ಸ್ವಾವಲಂಬಿ ಬದುಕನ್ನು ಕಲ್ಪಿಸಿವೆ ಎಂದರು.

ಜನೌಷಧ ಮಳಿಗೆಗೆ ಅನುಮತಿ ಪತ್ರ
5 ಸಹಕಾರಿ ಸಂಘ/ ಸಂಸ್ಥೆಗಳಿಗೆ ಜನೌಷಧ ಮಾರಾಟ ಮಳಿಗೆಯ ಅನುಮತಿ ಪತ್ರವನ್ನು ಹಸ್ತಾಂತರಿಸಲಾ ಯಿತು. “ಬಡವರ ಬಂಧು’ ಫ‌ಲಾನು ಭವಿಗಳಿಗೆ ವಿಶೇಷ ಸವಲತ್ತುಗಳ ವಿತರಣೆ, ದ.ಕ. ಮತ್ತು ಉಡುಪಿ ಜಿಲ್ಲೆಗಳ ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ, ಶ್ರೇಷ್ಠ ಸಹಕಾರಿ ಗಳಿಗೆ ಪ್ರಶಸ್ತಿ, ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ವಿಶೇಷ ಪ್ರಶಸ್ತಿ, ಉತ್ತಮ ನವೋದಯ ಸ್ವಸಹಾಯ ಸಂಘಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲಾ ಸಹಕಾರಿ ಯೂನಿಯನ್‌ನ “ಕರಾವಳಿ’ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾ ಯಿತು. ಉತ್ತಮ ನವೋದಯ ಸ್ವ ಸಹಾಯ ಸಂಘಗಳನ್ನು ಪುರಸ್ಕರಿಸಲಾ ಯಿತು. ಮೇಯರ್‌ ದಿವಾಕರ ಪಾಂಡೇಶ್ವರ ಸಹಕಾರ ಸಂಘಗಳ ಮಳಿಗೆಗಳನ್ನು ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್‌ ಧ್ವಜಾರೋಹಣ ಮಾಡಿದರು.

Advertisement

ಅಡಿಕೆಗೆ ಉತ್ತಮ ಬೆಲೆ: ನಳಿನ್‌
ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಅಡಿಕೆಗೆ ಉತ್ತಮ ಬೆಲೆ ಸಿಕ್ಕಿದ ಕಾರಣ ಕರಾವಳಿ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ತೀರಾ ಕಡಿಮೆ. ಅಡಿಕೆಗೆ ಉತ್ತಮ ಬೆಲೆ ದೊರಕಿಸುವಲ್ಲಿ ಕ್ಯಾಂಪ್ಕೊ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಮಹಾ ಮಂಡಳದ ಅಧ್ಯಕ್ಷ ಯಶ್‌ಪಾಲ… ಸುವರ್ಣ, ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಸ್ಕ್ಯಾಡ್ಸ್‌ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರಿಗಳಾದ ವಿನಯ ಕುಮಾರ್‌ ಸೂರಿಂಜೆ, ಷಡಾಕ್ಷರಿ, ಎಸ್‌. ಜಿಯಾವುಲ್ಲಾ, ಬೆಳ್ಳಿಪ್ಪಾಡಿ ಪ್ರಸಾದ್‌ ಕೌಶಲ… ಶೆಟ್ಟಿ, ದೇವರಾಜ್‌ ಸಿ.ಎನ್‌., ಆರ್‌. ಶ್ರೀಧರ್‌, ಪ್ರಕಾಶ್‌ ರಾವ್‌, ಪ್ರವೀಣ್‌ ಬಿ. ನಾಯಕ್‌, ಬಿ.ಕೆ. ಸಲೀಂ, ರವೀಂದ್ರ ಬಿ., ಬಿ. ಜಯಕರ ಶೆಟ್ಟಿ ಇಂದ್ರಾಳಿ, ಡಾ| ಕೆ.ಸಿ. ಯತೀಶ್‌ ಕುಮಾರ್‌, ಸುರೇಶ್‌ ಕುಮಾರ್‌, ಎಸ್‌.ಎನ್‌. ಅರುಣ್‌ ಕುಮಾರ್‌, ಕೆ.ಎಸ್‌. ಬಾಲಸುಬ್ರಹ್ಮಣ್ಯ, ಪೂರ್ಣಿಮಾ ಶೆಟ್ಟಿ, ಪುರುಷೋತ್ತಮ ಎಸ್‌.ಸಿ., ಪ್ರವೀಣ್‌ ಉಪಸ್ಥಿತರಿದ್ದರು.

ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಬೆಳಪು ದೇವಿಪ್ರಸಾದ್‌ ಶೆಟ್ಟಿ ವಂದಿಸಿದರು. ಮನೋಹರ ಪ್ರಸಾದ್‌ ಮತ್ತು ಲಕ್ಷ್ಮಣ ಕುಮಾರ್‌ ಮಲ್ಲೂರು ಕಾರ್ಯಕ್ರಮ ನಿರ್ವಹಿಸಿದರು.

ನಮ್ಮಲ್ಲಿಗೆ ಬನ್ನಿ: ಎಂಎನ್‌ಆರ್‌ಗೆ ನಳಿನ್‌ ಆಹ್ವಾನ!
ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಅವರು ತಮ್ಮ ಪಕ್ಷ ಸೇರುವಂತೆ ಪರೋಕ್ಷ ಆಹ್ವಾನ ನೀಡಿದರು. ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸು ತ್ತಿರುವ ಅವರು ರಾಷ್ಟ್ರ, ಅಂತಾ ರಾಷ್ಟ್ರೀಯ ಮಟ್ಟದ ನಾಯಕ ರಾಗಬೇಕೆನ್ನುವುದು ನಮ್ಮೆಲ್ಲರ ಆಸೆ. ಇದು ಬಹಿರಂಗವಾಗಿ ಚರ್ಚಿಸುವ ವಿಚಾರ ಅಲ್ಲವಾದ್ದ ರಿಂದ ಅವರ ಬಳಿ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದು ಹೇಳಿದರು.

ಮೋಸಗಾರ ಸಹಕಾರಿಗಳಿಗೆ ಶಿಕ್ಷೆ
ಉತ್ತಮ ಸಹಕಾರಿಗಳಿಗೆ ಅನ್ಯಾಯ ಆಗಬಾರದು. ಹಾಗೆಯೇ ಮೋಸ ಮಾಡುವ ಸಹಕಾರಿಗಳನ್ನು ಬಿಡಬಾರದು. ರಾಜ್ಯದಲ್ಲಿ 280 ಸಹಕಾರ ಬ್ಯಾಂಕುಗಳಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಯಾವುದೋ ಒಂದರಲ್ಲಿ ನಡೆದ ಮೋಸಕ್ಕೆ ಒಟ್ಟು ವ್ಯವಸ್ಥೆಯನ್ನು ಹೊಣೆ ಮಾಡ‌ಲಾಗದು. ವಂಚನೆ ಮಾಡಿದವರು ಜೈಲಿಗೆ ಹೋಗಬೇಕಾಗುತ್ತದೆ. – ಎಸ್‌.ಟಿ. ಸೋಮಶೇಖರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next