ವಿನಾ ಡೆಲ್‌ಮಾರ್: ಮಧ್ಯ ಚಿಲಿಯಲ್ಲಿ ತಾಪಮಾನ ಹೆಚ್ಚಳದಿಂದಾಗಿ ಹಬ್ಬಿರುವ ಕಾಡ್ಗಿಚ್ಚು ದಿನದಿಂದ ದಿನಕ್ಕೆ ವಸತಿ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಇದರಿಂದ ಈ ವರೆಗೆ 46 ಮಂದಿ ಮೃತರಾಗಿದದ್ದು, 1,100ಕ್ಕೂ ಅಧಿಕ ಮನೆಗಳು ಸುಟ್ಟು ಬೂದಿಯಾಗಿವೆ ಎಂದು ಚಿಲಿ ಅಧ್ಯಕ್ಷ ಗ್ರೇಬಿಯಲ್ ಬೋರಿಕ್ ಹೇಳಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಗೇಬ್ರಿಯಲ್ ” ವಾಲ್ಪಾರೈಸೋ ಪ್ರದೇಶದಲ್ಲಿ ಕಾಡ್ಗಿಚ್ಚಿನ ಪ್ರಮಾಣ ತೀವ್ರವಾಗಿದೆ. ಅದನ್ನು ನಂದಿಸಲು ಅಗ್ನಿಶಾಮಕದಳಗಳು ಟ್ಯಾಂಕರ್, ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡುತ್ತಿದ್ದರೂ ಬರುತ್ತಿಲ್ಲ ಎಂದಿದ್ದಾರೆ.
Advertisement