ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 452 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ
ಸಲ್ಲಿಸಲು ಮಾ.26 ಕೊನೇ ದಿನವಾಗಿತ್ತು. ಅದರಂತೆ 14 ಲೋಕ ಸಭಾ ಕ್ಷೇತ್ರಗಳಲ್ಲಿ 340 ಅಭ್ಯರ್ಥಿ ಗಳಿಂದ 452 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಬೆಂಗಳೂರು
ಉತ್ತರ ಕ್ಷೇತ್ರದಲ್ಲಿ ಅತಿ ಹೆಚ್ಚು 36 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ, ಮೈಸೂರಿನಲ್ಲಿ ಅತಿ ಹೆಚ್ಚು 49 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಮಾಹಿತಿ ನೀಡಿದರು. ಈ 14 ಕ್ಷೇತ್ರಗಳಲ್ಲಿ ಮಾ.27ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾ.29 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ. 2014ರ ಲೋಕಸಭೆ ಚುನಾವಣೆ ವೇಳೆ ಈ 14 ಕ್ಷೇತ್ರಗಳಲ್ಲಿ 306 ನಾಮಪತ್ರಗಳು ಸಲ್ಲಿಕೆಯಾಗಿ, 233 ಅಭ್ಯರ್ಥಿ ಗಳು ಅಂತಿಮ ಕಣದಲ್ಲಿದ್ದರು ಎಂದು ಸಂಜೀವ ಕುಮಾರ್ ಮಾಹಿತಿ ನೀಡಿದರು.
Advertisement
ಕ್ಷೇತ್ರ ಅಭ್ಯರ್ಥಿಗಳು ನಾಮಪತ್ರಗಳುಉಡುಪಿ-ಚಿಕ್ಕಮಗಳೂರು 14 26
ಹಾಸನ 10 18
ದಕ್ಷಿಣ ಕನ್ನಡ 15 24
ಚಿತ್ರದುರ್ಗ 24 29
ತುಮಕೂರು 23 35
ಮಂಡ್ಯ 29 37
ಮೈಸೂರು 34 49
ಚಾಮರಾಜನಗರ 13 18
ಬೆಂಗಳೂರು ಗ್ರಾಂ. 22 26
ಬೆಂಗಳೂರು ಉತ್ತರ 37 46
ಬೆಂಗಳೂರು ಕೇಂದ್ರ 35 40
ಬೆಂಗಳೂರು ದಕ್ಷಿಣ 36 41
ಚಿಕ್ಕಬಳ್ಳಾಪುರ 25 32
ಕೋಲಾರ 23 31