Advertisement

45 ಪ್ರವಾಹ ಪೀಡಿತ ತಾಲೂಕುಗಳ ಘೋಷಣೆ

06:00 AM Oct 01, 2018 | |

ಬೆಂಗಳೂರು:ಭಾರಿ ಮಳೆಯಿಂದ ತತ್ತರಿಸಿ ಅಪಾರ ಹಾನಿಗೊಳಗಾಗಿರುವ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳ 45 ತಾಲೂಕುಗಳನ್ನು ಸರ್ಕಾರ ಪ್ರವಾಹ ಪೀಡಿತ ಎಂದು ಘೋಷಿಸಿದೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಎಂಟು ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ವಿಪರೀತ ಪ್ರವಾಹ, ಭೂ ಕುಸಿತ, ಬೆಳೆ ಹಾನಿ, ಜನ ಜಾನುವಾರುಗಳ ಜೀವ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಎನ್‌ಡಿ.ಆರ್‌.ಎಫ್ ಅಡಿಯಲ್ಲಿ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿತ್ತು. ಮಳೆ ಹಾನಿಯಿಂದಾದ ನಷ್ಟವನ್ನು ಆಧರಿಸಿ ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಭಾಗಗಳ ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲಗಳ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ಸಿಗಲಿದೆ.  ಪ್ರವಾಹ, ಅನಾವೃಷ್ಠಿ,  ಅಗ್ನಿ ಅವಘಡ ಸೇರಿದಂತೆ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಹೆಚ್ಚಿನ ಕಾಲಾವಕಾಶ ನೀಡಲು ಆರ್‌ಬಿಐ ನಿಯಮಗಳಲ್ಲಿ ಅವಕಾಶವಿದೆ. ಜೊತೆಗೆ ಇಂತಹ ಸಂದರ್ಭದಲ್ಲಿ ಸಂತ್ರಸ್ಥರ ಅಲ್ಪಾವಧಿ ಸಾಲವು ದೀರ್ಘಾವಧಿ ಸಾಲವಾಗಿ ಮಾರ್ಪಡುತ್ತದೆ ಹಾಗೂ ಹೊಸ ಸಾಲ ತೆಗೆದುಕೊಳ್ಳಲೂ ಅವಕಾಶ ದೊರೆಯುತ್ತದೆ .

ಅಲ್ಲದೇ ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಚಟುವಟಿಕೆಗಳು ಎಂದಿನಂತೆ ನಡೆಯಲು ಅಗತ್ಯವಿರುವ ಎಲ್ಲ ಪರಿಹಾರ ಕ್ರಮಗಳನ್ನು ಒದಗಿಸಲು ಆರ್‌ಬಿಐ ನಿಯಮಗಳಲ್ಲಿ ಅವಕಾಶಿವಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ರಾಜ್ಯ ಮಟ್ಟದ ಬ್ಯಾಂಕ್‌ರ್‌ಗಳ ಸಭೆ, ಕೊಡಗಿನಲ್ಲಿ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಸಭೆ ಕೂಡ ನಡೆದಿದೆ.  ನೆರೆ ಪೀಡಿತ ರೈತರಿಗೆ ಹೆಚ್ಚಿನ ನೆರವು ಸಿಗಲಿದೆ. ಉಳಿದಂತೆ ಪ್ರವಾಹ ಪೀಡಿತರಿಗೆ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಅಗತ್ಯ ಪರಿಹಾರಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರವಾಹ ಪೀಡಿತ ತಾಲೂಕುಗಳು
ಕೊಡಗು ಜಿಲ್ಲೆ

ಮಡಿಕೇರಿ
ಸೋಮವಾರ ಪೇಟೆ
ವಿರಾಜಪೇಟೆ

Advertisement

ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು
ಬಂಟ್ವಾಳ
ಪುತ್ತೂರು
ಸುಳ್ಯ
ಬೆಳ್ತಂಗಡಿ

ಉಡುಪಿ ಜಿಲ್ಲೆ
ಕುಂದಾಪುರ
ಉಡುಪಿ
ಕಾರ್ಕಳ

ಶಿವಮೊಗ್ಗ ಜಿಲ್ಲೆ
ಭದ್ರಾವತಿ
ಶಿಕಾರಿಪುರ
ಸಾಗರ
ಸೊರಬ
ತೀರ್ಥಹಳ್ಳಿ
ಹೊಸನಗರ
ಶಿವಮೊಗ್ಗ

ಉತ್ತರ ಕನ್ನಡ ಜಿಲ್ಲೆ
ಕಾರವಾರ
ಅಂಕೋಲಾ
ಕುಮಟಾ
ಹೊನ್ನಾವರ
ಭಟ್ಕಳ
ಸಿದ್ದಾಪುರ
ಶಿರಸಿ
ಮುಂಡಗೋಡ
ಯಲ್ಲಾಪುರ
ಜೋಯಿಡಾ
ಹಳಿಯಾಳ

ಹಾಸನ ಜಿಲ್ಲೆ
ಸಕಲೇಶಪುರ
ಅರಕಲಗೂಡು
ಹೊಳೆ ನರಸಿಪುರ
ಆಲೂರು

ಚಿಕ್ಕಮಗಳೂರು ಜಿಲ್ಲೆ
ಎನ್‌.ಆರ್‌.ಪುರ
ಚಿಕ್ಕಮಗಳೂರು
ಮೂಡಿಗೆರೆ
ಶೃಂಗೇರಿ
ಕೊಪ್ಪ

ಮೈಸೂರು ಜಿಲ್ಲೆ
ಎಚ್‌.ಡಿ.ಕೋಟೆ
ಹುಣಸೂರು
ಕೃಷ್ಣರಾಜನಗರ
ಮೈಸೂರು
ನಂಜನಗೂಡು
ಪಿರಿಯಾಪಟ್ಟಣ
ಟಿ. ನರಸೀಪುರ

Advertisement

Udayavani is now on Telegram. Click here to join our channel and stay updated with the latest news.

Next