Advertisement

ಅಸ್ಸಾಂನಲ್ಲಿ ಕೇಸರಿ ಪಡೆ ಮೇಲುಗೈ : ಮುಖ್ಯಮಂತ್ರಿ ಸರ್ಬಾನಂದ 4400 ಮತಗಳ ಮುನ್ನಡೆ

12:20 PM May 02, 2021 | Team Udayavani |

ನವದೆಹಲಿ : ದೇಶದ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು(ಭಾನುವಾರ) ಹೊರ ಬೀಳಲಿದೆ. ಈಗಗಲೇ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ.

Advertisement

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿ ಕೂಟ ಮೇಲು ಗೈ ಸಾಧಿಸುತ್ತಿದೆ. ಸದ್ಯದ ಮತ ಎಣಿಕೆ ಪ್ರಕಾರ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್‌ ಮುನ್ನಡೆ ಸಾಧಿಸಿದ್ದಾರೆ. ಎನ್ ಡಿ ಎ 84 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಇತ್ತ ಯುಪಿಎ ಮೈತ್ರಿ ಕೂಟ 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಸದ್ಯದ ಮತ ಎಣಿಕೆ ಪ್ರಕಾರ  ಕಾಂಗ್ರೆಸ್ ಅಭ್ಯರ್ಥಿ ರಜಿಬ್ ಲೋಚನ್ ಪೆಗು 1619 ಮತಗಳನ್ನು ಪಡೆದಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ಹಾಗೂ ಸಿಎಂ ಸರ್ಬಾನಂದ ಸೋನಾವಾಲ್‌ 4400 ಮತಗಳನ್ನು ಪಡೆದು ಭಾರೀ ಮುನ್ನಡೆಯಲ್ಲಿದ್ದಾರೆ. ಇನ್ನು ಅಸ್ಸಾಂ ಜಾತೀಯ ಪ್ರದೇಶದ್ ಪಕ್ಷದ ಸಿಶುಧರ್ 422 ಮತಗಳನ್ನು ಪಡೆದಿದ್ದಾರೆ.

ಈ ಅಂಕಿ ಅಂಶಗಳನ್ನು ನೋಡುತ್ತಿದ್ದರೆ,  ಈ ಬಾರಿಯೂ ಕೂಡ ಕೇಸರಿ ಪಾಳಯ ಗೆದ್ದು ಗದ್ದುಗೆ ಏರುತ್ತದೆ ಎಂದು ಗೋಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next