Advertisement

4.4 ಕೋ. ರೂ ವೆಚ್ಚದ ರಸ್ತೆ ಕಾಂಕ್ರೀಟ್‌ ಕಾಮಗಾರಿ

01:23 PM Feb 04, 2018 | |

ಸಸಿಹಿತ್ಲು: ಸರ್ಫಿಂಗ್ ನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಸಿಹಿತ್ಲು ಮುಂಡ ಬೀಚ್‌ನ್ನು ಹಳೆಯಂಗಡಿ ಗ್ರಾ.ಪಂ.ನ ಬೀಚ್‌ ಅಭಿವೃದ್ಧಿ ಸಮಿತಿಯ ಮೂಲಕ ಎಲ್ಲ ಪೂರಕ ಯೋಜನೆಗಳನ್ನು ಕೈಗೊಳ್ಳಲು ಬದ್ಧರಾಗಿದ್ದು, ವಿವಿಧ ಇಲಾಖೆಗಳ ಮೂಲಕ ಅನುದಾನವನ್ನು ಒದಗಿಸಲಾಗುತ್ತಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್‌ ಹೇಳಿದರು.

Advertisement

ಶ್ರೀ ಭಗವತಿ ಕ್ಷೇತ್ರದಿಂದ ಸಸಿ ಹಿತ್ಲು ಬೀಚ್‌ಗೆ ತೆರಳುವ ಮುಖ್ಯ ರಸ್ತೆಯಲ್ಲಿ ಸುಮಾರು 4.4 ಕೋಟಿ ರೂ. ವೆಚ್ಚದ ಸುನಾಮಿ ಫಂಡ್‌ನ‌ಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್‌ ರಸ್ತೆಗೆ ಸಸಿಹಿತ್ಲುವಿನ ಶ್ರೀ ಭಗವತಿ ಕ್ಷೇತ್ರದ ಬಳಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿ ಈಗಾಗಲೇ ಒಟ್ಟು 5 ಕೋ. ರೂ. ವೆಚ್ಚದಲ್ಲಿ ವಿವಿಧ ಹಂತದ ತಡೆಗೋಡೆ ರಚನೆ, 4.9 ಕೋ. ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಾಣ, ಸಸಿಹಿತ್ಲುವಿನ ಮುಂಡಾ ಬೀಚ್‌ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಸಂಚಾರದ ಒತ್ತಡದಿಂದ ಈಗಿರುವ ಡಾಮರು ರಸ್ತೆಯು ಮಳೆಗಾಲದಲ್ಲಿ ಹದಗೆಡುತ್ತದೆ. ರಸ್ತೆಯ ಬಾಳಿಕೆಗೆ ಕಾಂಕ್ರೀಟ್‌ ಹಾಕಲಾಗುವುದು ಎಂದರು.

ಉತ್ತಮ ಅಭಿವೃದ್ಧಿ
ರಾಜ್ಯ ಅಲ್ಪಸಂಖ್ಯಾಕರ ನಿಗಮದ ಅಧ್ಯಕ್ಷ ಎಂ.ಎ. ಗಫೂರ್‌ ಮಾತನಾಡಿ, ಶಾಸಕ ಕೆ. ಅಭಯ ಚಂದ್ರ ಅವರು 25 ವರ್ಷಗಳಿಂದ ತಮ್ಮ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅವರ ಕ್ಷೇತ್ರವು ರಾಜ್ಯದಲ್ಲಿ ಹೆಚ್ಚಿನ ಅನುದಾನ ಬಳಕೆಯಾದ ಕ್ಷೇತ್ರವಾಗಿದೆ. ರಾಜ್ಯ ಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಅವರು ತಮ್ಮ ಅನುದಾನವನ್ನು ಇಲ್ಲಿನ ಅಭಿವೃದ್ಧಿಗೆ ಸಹಕರಿಸುವುವ ಭರವಸೆಯನ್ನು ನೀಡಿದ್ದಾರೆ ಎಂದರು.

ಗುದ್ದಲಿ ಪೂಜೆ
ಕೇಶವ ಸಾಲ್ಯಾನ್‌ ತೆಂಗಿನ ಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದರು. ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್‌ ಅಜೀಜ್‌, ಅಬ್ದುಲ್‌ ಖಾದರ್‌, ಚಿತ್ರಾ ಸುರೇಶ್‌, ಗುಣವತಿ, ಚಂದ್ರ ಕುಮಾರ್‌, ಅನಿಲ್‌ ಕುಮಾರ್‌, ಅಶೋಕ್‌ ಬಂಗೇರ, ಮಾಲತಿ ಡಿ. ಕೋಟ್ಯಾನ್‌, ಎಚ್‌. ಹಮೀದ್‌, ಶರ್ಮಿಳಾ ಎಸ್‌. ಕೋಟ್ಯಾನ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶ್ಯಾಲೆಟ್‌ ಪಿಂಟೋ, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ ಮಟ್ಟು, ಉದ್ಯಮಿ ಪ್ರಸಾದ್‌ ಕಾಂಚನ್‌, ಎಸ್‌. ಸನಿಲ್‌, ಕಾಂತು ಲಕ್ಕಣ ಯಾನೆ ಯಾದವ ಬಂಗೇರ, ಮೂಲ್ಕಿ ನ.ಪಂ. ಸದಸ್ಯರಾದ ಯೋಗೀಶ್‌ ಕೋಟ್ಯಾನ್‌, ಅಶೋಕ್‌ ಪೂಜಾರ, ಕದಿಕೆ ಮೊಗವೀರ ಸಭಾದ ಅಧ್ಯಕ್ಷ ವಿಟ್ಠಲ ಬಂಗೇರ, ಧನರಾಜ್‌ ಕೋಟ್ಯಾನ್‌, ಜಗನ್ನಾಥ ಕೋಟ್ಯಾನ್‌, ಫಿಲಿಪ್‌ ಡಿ’ಕೋಸ್ತಾ, ಮಾಜಿ ತಾ.ಪಂ. ಸದಸ್ಯ ಮನ್ಸೂರ್‌ ಸಾಗ್‌, ಶಿವಾನಂದ ಆರ್‌.ಕೆ., ಮಲ್ಲಿಕಾರ್ಜುನ ಆರ್‌. ಕೆ., ಕೇಶವ ಸಾಲ್ಯಾನ್‌, ರಿತೇಶ್‌ ಕುಮಾರ್‌, ಮಂಜುನಾಥ ಕಂಬಾರ ಉಪಸ್ಥಿತರಿದ್ದರು. ಸಸಿಹಿತ್ಲು ಬೀಚ್‌ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್‌. ವಸಂತ ಬೆರ್ನಾರ್ಡ್‌ ಸ್ವಾಗತಿಸಿ, ನಿರೂಪಿಸಿದರು. ಗ್ರಾ.ಪಂ. ಸದಸ್ಯ ಅನಿಲ್‌ಕುಮಾರ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next