Advertisement

148 ದಿನಗಳಲ್ಲಿ 267 ಆ್ಯಪ್ಸ್‌ ಬ್ಲಾಕ್‌‌; ಮಂಗಳವಾರ ಬ್ಯಾನ್‌ಗೊಂಡ ಆ್ಯಪ್‌ಗಳ ವಿವರ ಇಲ್ಲಿದೆ

09:01 PM Nov 24, 2020 | Karthik A |

ಮಣಿಪಾಲ: ಕೇಂದ್ರ ಸರಕಾರ ಮಂಗಳವಾರ 43 ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿದೆ.  ಈ ಮೂಲಕ 148 ದಿನಗಳಲ್ಲಿ 267 ಅಪ್ಲಿಕೇಶನ್‌ಗಳನ್ನು ಬ್ಲಾಕ್‌ ಮಾಡಿದಂತಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 69 ಎ ಅಡಿಯಲ್ಲಿ ಕೇಂದ್ರವು ಈ ನಿಷೇಧವನ್ನು ವಿಧಿಸಿದೆ. ಈ ಅಪ್ಲಿಕೇಶನ್‌ಗಳು ಇದು ದೇಶದ ಏಕತೆ, ಸಮಗ್ರತೆ, ಭದ್ರತೆಗೆ ಧಕ್ಕೆ ತರುತ್ತದೆ ಎಂದು ಕೇಂದ್ರ ಹೇಳಿದೆ.

Advertisement

ಮಂಗಳವಾರ ನಿಷೇಧಿಸಲಾದ 43 ಅಪ್ಲಿಕೇಶನ್‌ಗಳ ಪೈಕಿ 14 ಡೇಟಿಂಗ್, 8 ಗೇಮಿಂಗ್ ಅಪ್ಲಿಕೇಶನ್‌ಗಳು, 6 ವ್ಯವಹಾರ ಮತ್ತು ಹಣಕಾಸು ಮತ್ತು ಮನರಂಜನ ಅಪ್ಲಿಕೇಶನ್ ಸೇರಿವೆ.

ಚೀನದ ಆ್ಯಪ್ ಟಿಕ್‌ಟಾಕ್ ಅನ್ನು ನಿಷೇಧಿಸಿರುವ ಕೇಂದ್ರ ಸರಕಾರ ಈಗ ಜನಪ್ರಿಯ ಚಾಟ್ ಆ್ಯಪ್ ಸ್ನ್ಯಾಕ್ ವೀಡಿಯೋವನ್ನು ನಿಷೇಧಿಸಿದೆ. ಇದು ಸಿಂಗಾಪುರ ಮೂಲದ ಚೀನೀ ಸಾಫ್ಟ್‌ವೇರ್ ಕಂಪೆನಿಯಾಗಿದೆ. ಇದು 100 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಟಿಕ್‌ಟಾಕ್ ಅನ್ನು ನಿಷೇಧಿಸಿದ ಬಳಿಕ ಅಂದರೆ 5 ತಿಂಗಳುಗಳಲ್ಲಿ ಸುಮಾರು 50 ಮಿಲಿಯನ್ ಬಳಕೆದಾರರು ಹೆಚ್ಚಾಗಿದ್ದರು. ಇದು ಟಿಕ್‌ಟಾಕ್‌ ಪ್ರಿಯರಿಗೆ ಉತ್ತಮ ಪರ್ಯಾಯ ಆಯ್ಕೆಯಾಗಿತ್ತು. ಇನ್ನೊಂದು ಅಂಶ ಎಂದರೆ ಈ ಆ್ಯಪ್ ಹೆಚ್ಚಿನ ಬಳಕೆದಾರರು ಭಾರತದಲ್ಲಿದ್ದಾರೆ. ಇದಲ್ಲದೆ ಚೀನದ ಖ್ಯಾತ ವ್ಯಾಪಾರ ಉದ್ಯಮಿ ಜ್ಯಾಕ್ ಅವರ ಕಂಪೆನಿಯಾದ ಅಲಿಬಾಬಾದ 4 ಆ್ಯಪ್‌ಗಳು ಬ್ಯಾನ್‌ ಆದ ಸಾಲಿನಲ್ಲಿದೆ.

ಯಾವೆಲ್ಲ ಅಪ್ಲಿಕೇಶನ್‌ ಬ್ಲಾಕ್‌
ಅಲಿ ಸಪ್ಲೈಯರ್ಸ್‌, ಅಲಿ ಬಾಬಾ ವರ್ಕ್‌ಬೆಂಚ್, ಅಲಿ ಎಕ್ಸ್‌ಪ್ರೆಸ್ – ಸ್ಮಾರ್ಟ್ ಶಾಪಿಂಗ್, ಬೆಟರ್‌ ಲಿವಿಂಗ್‌, ಅಲಿಪೇ ಕ್ಯಾಷಿಯರ್, ಲಾಲಮೋವ್ ಇಂಡಿಯಾ – ಡೆಲಿವರಿ ಅಪ್ಲಿಕೇಶನ್, ಡ್ರೈವ್ ವಿತ್ ಲಾಲಮೋವ್ ಇಂಡಿಯಾ, ಸ್ನ್ಯಾಕ್ ವಿಡಿಯೋ, ಕ್ಯಾಮ್‌ಕಾರ್ಡ್ – ಬ್ಯುಸಿನೆಸ್ ಕಾರ್ಡ್ ರೀಡರ್, ಕ್ಯಾಮ್ ಕಾರ್ಡ್ – ಬಿಸಿಆರ್ (ವೆಸ್ಟರ್ನ್), ಸೋಲ್‌ -ಫಾಲೋ ದ ಸೋಲ್‌ ಫೈಂಡ್‌ ಯು, ಚೈನೀಸ್ ಸೋಷಿಯಲ್‌, ಫ್ರೀ ಆನ್‌ಲೈನ್ ಡೇಟಿಂಗ್ ವೀಡಿಯೋ ಅಪ್ಲಿಕೇಶನ್ ಮತ್ತು ಚಾಟ್, ಡೇಟ್‌ ಇನ್‌ ಏಷ್ಯಾ, ವಿ ಡೇಟ್‌, ಫ್ರೀ ಡೇಟಿಂಗ್ ಅಪ್ಲಿಕೇಶನ್ – ಸಿಂಗಲ್ಸ್‌ ಸ್ಟಾರ್ಟ್‌ ಯುವರ್‌ ಡೇಟ್‌, ಅಡೋರ್‌ ಆ್ಯಪ್, ಟ್ರೂಲಿ ಚೈನೀಸ್, ಟ್ರೂಲಿ ಏಷ್ಯನ್, ಚೀನ ಲವ್, ಡೇಟ್‌ ಮೈ ಏಜ್‌, ಏಷ್ಯನ್ ಡೇಟ್‌, ಫ್ಲರ್ಟ್‌ ವಿಶ್‌, ಗಯ್ಸ್‌ ಓನ್ಲೀ, ಟ್ಯೂಬಿಟ್, ವಿವರ್ಕ್ ಚೀನ, ಫಸ್ಟ್ ಲವ್ ಲೈವ್, ರೆಲ್ಲಾ – ಲೆಸ್ಬಿಯನ್ ಸೋಷಿಯಲ್ ನೆಟ್‌ವರ್ಕ್, ಕ್ಯಾಷಿಯರ್ ವಾಲೆಟ್, ಮ್ಯಾಂಗೋ ಟಿವಿ, ಎಂಜಿ ಟಿವಿ, ಟಿವಿ – ಟಿವಿ ಆವೃತ್ತಿ, ಡ್ರಾಮಾ & ಮೋರ್‌ ಟಿವಿ, ವಿ ಟಿವಿ ಲೈಟ್, ಲಕ್ಕಿ ಲೈವ್, ಲೋವಾ ಲೈವ್, ಡಿಂಗ್ ಟಾಕ್, ಐಡೆಂಟಿಟಿ ವಿ, ಐಸ್ಲ್ಯಾಂಡ್ 2, ಬಾಕ್ಸ್‌ಸ್ಟಾರ್, ಹೀರೋಸ್ ಇವಾಲ್ವಡ್‌, ಹ್ಯಾಪಿ ಫಿಶ್, ಜೆಲ್ಲಿಪಾಪ್ ಮ್ಯಾಚ್‌, ಮಂಚಿಕಿನ್‌ ಮ್ಯಾಚ್‌ ಮತ್ತು ಕಾಂಕ್ವಿಸ್ಟಾ.

148 ದಿನಗಳಲ್ಲಿ 267 ಅಪ್ಲಿಕೇಶನ್‌ಗಳನ್ನು ನಿಷೇಧ
ಗಾಲ್ವಾನ್ ಘರ್ಷಣೆ ನಡೆದ ಜೂನ್ 15ರ ಬಳಿಕ ಚೀನಕ್ಕೆ ಬಲವಾದ ಸಂದೇಶವನ್ನು ನೀಡಲು ಮತ್ತು ಅದರ ಮೇಲೆ ಒತ್ತಡ ಹೇರುವ ಸಲುವಾಗಿ ಸರಕಾರವು ಮೊದಲ ಬಾರಿಗೆ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಇದರ ಬಳಿಕ ಅಂದರೆ ಈ 148 ದಿನಗಳಲ್ಲಿ 267 ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ. ನಿಷೇಧಗೊಂಡ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ಚೀನದ್ದು.

Advertisement

ಜೂನ್ 29
59 ಚೈನೀಸ್ ಅಪ್ಲಿಕೇಶನ್‌ಗಳನ್ನು ಜೂನ್ 29ರಂದು ನಿಷೇಧಿಸಲಾಗಿತ್ತು. ಅಪ್ಲಿಕೇಶನ್‌ಗಳ ನಿಷೇಧಕ್ಕೆ ರಾಷ್ಟ್ರೀಯ ಭದ್ರತೆಗೆ ಇವು ಅಪಾಯ ಎಂಬ ಕಾರಣ ನೀಡಿತ್ತು. ಮಾತ್ರವಲ್ಲದೇ ಗಾಲ್ವಾನ್ ಘರ್ಷಣೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಜುಲೈ 27
ಮುಂದುವರಿದ ಭಾಗವಾಗಿ ಜುಲೈ 27ರಂದು 47 ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಯಿತು. ಲಡಾಖ್‌ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಾಗ ಮತ್ತು ಚೀನದ ಪಡೆಗಳು ಎರಡು ಬಾರಿ ಒಳನುಸುಳಲು ಪ್ರಯತ್ನಿಸಿದ ಸಂದರ್ಭ ಸರಕಾರ ಈ ಕ್ರಮ ಕೈಗೊಂಡಿತ್ತು.

ಸೆಪ್ಟೆಂಬರ್ 2
ಬಹು ಬೇಡಿಕೆ ಹೊಂದಿದ್ದ ಪಬ್‌ಜಿ ಸೇರಿದಂತೆ 118 ಆ್ಯಪ್‌ಗಳನ್ನು ಸೆಪ್ಟೆಂಬರ್ 2ರಂದು ಸರಕಾರ ನಿಷೇಧಿಸಲಾಗಿತ್ತು. 175 ದಶಲಕ್ಷಕ್ಕೂ ಹೆಚ್ಚು ಜನರು ಪಬ್‌ಜಿ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು.

ನವೆಂಬರ್ 24
43 ಮೊಬೈಲ್ ಅಪ್ಲಿಕೇಶನ್‌ಗಳನ್ನು ಇಂದು (ನವೆಂಬರ್ 24ರಂದು)ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next