Advertisement
ಇಂದಿನ 42 ಪ್ರಕರಣಗಳಲ್ಲಿ 25 ಮಂದಿ ಅಹಮದಾಬಾದ್ ಪ್ರಯಾಣ ಹಿನ್ನಲೆ ಹೊಂದಿದವರಾಗಿದ್ದಾರೆ. ಆರು ಮಂದಿ ಮುಂಬೈ ಪ್ರಯಾಣ ಮಾಡಿದ ಹಿನ್ನಲೆ ಹೊಂದಿದವರಾಗಿದ್ದಾರೆ. ಈವರೆಗೆ ಸೋಂಕು ಭೀತಿ ಇರದ ಹಾಸನ, ಯಾದಗಿರಿಯಲ್ಲೂ ಸೋಂಕು ಕಂಡು ಬಂದಿದೆ.
Related Articles
Advertisement
ಬೀದರ್ ನಲ್ಲಿ ಇಬ್ಬರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇಬರಿಬ್ಬರೂ ಇಲ್ಲಿನ ಕಂಟೈನ್ ಮೆಂಟ್ ಝೋನ್ ನ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡು ಸೋಂಕು ಪ್ರಕರಣಗಳು ದೃಢವಾಗಿದೆ. ಇವರಿಬ್ಬರೂ ಸೋಂಕಿತ ಸಂಖ್ಯೆ 507ರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಎರಡು ಕೋವಿಡ್-19 ಪ್ರಕರಣಗಳು ದೃಢವಾಗಿದೆ. 33 ವರ್ಷದ ಮಹಿಳೆ ಮತ್ತು 38 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದುಇವರಿಬ್ಬರೂ ಅಹಮದಾಬಾದ್ ಪ್ರಯಾಣದ ಹಿನ್ನಲೆ ಹೊಂದಿದರು .
ಬಳ್ಳಾರಿಯಲ್ಲಿ 30 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ, ಮಂಡ್ಯ, ಕಲಬುರಗಿಯಲ್ಲೂ ತಲಾ ಒಂದು ಪ್ರಕರಣ ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು 904 ಪ್ರಕರಣಗಳು ದೃಢವಾಗಿದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿನ ಕಾರಣದಿಂದ 31 ಜನರು ಸಾವನ್ನಪ್ಪಿದ್ದು, 426 ಜನರು ಗುಣಮುಖರಾಗಿದ್ದಾರೆ.