Advertisement
ಪ್ರವಾಹದಲ್ಲಿ ಸಿಲುಕಿದ್ದ 5.81 ಲಕ್ಷ ಜನರನ್ನು ರಕ್ಷಿಸಲಾ ಗಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 3.45 ಲಕ್ಷ ಜನರನ್ನು ರಕ್ಷಿಸಲಾಗಿದೆ. ಬಾಗಲಕೋಟೆಯಲ್ಲಿ 1 ಲಕ್ಷ ಸಂತ್ರಸ್ತರನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ ನಿರಾಶ್ರಿತರಾಗಿರುವ ಜನರಿಗೆ 1181 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದ್ದು, 3.32 ಲಕ್ಷ ಜನರು ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
Related Articles
Advertisement
ಹಳ್ಳಿಗಳು: ಬೆಳಗಾವಿ-365, ಬಾಗಲ ಕೋಟೆ-173, ವಿಜಯಪುರ-73, ರಾಯ ಚೂರು-29, ಯಾದಗಿರಿ-8, ಉತ್ತರ ಕನ್ನಡ-216, ದಕ್ಷಿಣ ಕನ್ನಡ-50, ಶಿವಮೊಗ್ಗ-556, ಉಡುಪಿ-4, ಕೊಡಗು-58, ಚಿಕ್ಕಮಗಳೂರು-72, ಹಾಸನ- 655, ಗದಗ-175, ಮೈಸೂರು- 51, ಧಾರವಾಡ-21, ಹಾವೇರಿ-138, ಕಲಬುರಗಿ-50 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ.
ಜನರ ರಕ್ಷಣೆ: ಬೆಳಗಾವಿ-3.45 ಲಕ್ಷ, ಬಾಗಲಕೋಟೆ-1 ಲಕ್ಷ, ವಿಜಯಪುರ- 8650, ರಾಯಚೂರು-2639, ಯಾದಗಿರಿ-318, ಉತ್ತರ ಕನ್ನಡ-3088, ದಕ್ಷಿಣ ಕನ್ನಡ-3516, ಶಿವಮೊಗ್ಗ-6200, ಕೊಡಗು-4600, ಚಿಕ್ಕಮಗಳೂರು-980, ಗದಗ-51171, ಮೈಸೂರು-4889, ಧಾರವಾಡ-35680, ಹಾವೇರಿ-14350 ಜನರನ್ನು ರಕ್ಷಿಸಲಾಗಿದೆ.
ಸಾಂತ್ವನ ಕೇಂದ್ರಗಳು: ಬೆಳಗಾವಿ-436, ಬಾಗಲಕೋಟೆ-203, ವಿಜಯಪುರ-7, ರಾಯಚೂರು-15, ಯಾದಗಿರಿ-15, ಉತ್ತರ ಕನ್ನಡ-93, ದಕ್ಷಿಣ ಕನ್ನಡ-30, ಶಿವಮೊಗ್ಗ-25, ಉಡುಪಿ-0, ಕೊಡಗು-44, ಚಿಕ್ಕಮಗಳೂರು-12, ಹಾಸನ-11, ಗದಗ-40, ಮೈಸೂರು-32, ಧಾರವಾಡ-81, ಹಾವೇರಿ-137 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದೆ.
ಬೆಳೆ ಹಾನಿ: ಬೆಳಗಾವಿ-1.57 ಲಕ್ಷ ಹೆ., ಬಾಗಲಕೋಟೆ-29,765, ವಿಜಯಪುರ -16642, ರಾಯಚೂರು-2821, ಯಾದಗಿರಿ-2360, ಉತ್ತರ ಕನ್ನಡ- 10,100, ದಕ್ಷಿಣ ಕನ್ನಡ-14, ಶಿವಮೊಗ್ಗ- 18319, ಉಡುಪಿ-1171, ಕೊಡಗು-0, ಚಿಕ್ಕಮಗಳೂರು-1483, ಹಾಸನ- 2485, ಗದಗ-6172, ಮೈಸೂರು-201, ಧಾರವಾಡ-1.07 ಲಕ್ಷ, ಹಾವೇರಿ- 59773, ಕಲಬುರಗಿ-5830 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಮನೆ ಹಾನಿ: ಬೆಳಗಾವಿ-9748, ಬಾಗಲಕೋಟೆ-ಪರಿಶೀಲನೆಯಲ್ಲಿದೆ. ಉತ್ತರ ಕನ್ನಡ-2072, ದಕ್ಷಿಣ ಕನ್ನಡ-432, ಶಿವಮೊಗ್ಗ-805, ಉಡುಪಿ-455, ಕೊಡಗು-16, ಚಿಕ್ಕಮಗಳೂರು-327, ಹಾಸನ-763, ಗದಗ-1853, ಮೈಸೂರು-832, ಧಾರವಾಡ-7931, ಹಾವೇರಿ-6566 ಮನೆಗಳು ಹಾನಿಗೊಳಗಾಗಿವೆ.
ಎಲ್ಲಿ, ಎಷ್ಟು ಜೀವಹಾನಿ?ಬೆಳಗಾವಿ 12
ಬಾಗಲಕೋಟೆ 2
ಉತ್ತರ ಕನ್ನಡ 4
ದಕ್ಷಿಣ ಕನ್ನಡ 2
ಶಿವಮೊಗ್ಗ 3
ಉಡುಪಿ-2
ಕೊಡಗು-7
ಚಿಕ್ಕಮಗಳೂರು 5
ಮೈಸೂರು 2
ಧಾರವಾಡ 3 ಕಾಣೆಯಾದವರು: ಬೆಳಗಾವಿ-2, ಕೊಡಗು-8, ಚಿಕ್ಕಮಗಳೂರು-1, ಹಾವೇರಿ-1 ಕಾಣೆಯಾಗಿದ್ದಾರೆ.