ಸಿಂದಗಿ: ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನಗ್ರಾಮ ಪಂಚಾಯಿತ್‌ಗಳಿಗೆ ಡಿ. 27ರಂದುನಡೆಯುವ ಎರಡನೇ ಹಂತದ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕೇವಲ 11 ದಿನಗಳಲ್ಲಿಸಿಂದಗಿ ತಾಲೂಕಿಗೆ 26.62 ಲಕ್ಷ ರೂ, ದೇವರಹಿಪ್ಪರಗಿತಾಲೂಕಿಗೆ 16.12 ಲಕ್ಷ ರೂ. ಕಂದಾಯ ಬಾಕಿ ಹರಿದು ಬಂದಿದೆ.
ಸಿಂದಗಿ ತಾಲೂಕಿನ 23 ಗ್ರಾಪಂ ಮತ್ತು ದೇವರ ಹಿಪ್ಪರಗಿ ತಾಲೂಕಿನ 14 ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿದ್ದ ಅಭ್ಯರ್ಥಿಗಳು ತಮ್ಮ ಎಲ್ಲಾ ಕಂದಾಯ ಬಾಕಿ ಪಾವತಿಸಿ ದೃಢೀಕರಣಪತ್ರ ಮತ್ತು ಶೌಚಾಲಯ ನಿರ್ಮಾಣ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಪಂಚಾಯತ್ ಖಜಾನೆ ಭರ್ತಿಯಾಗಿದೆ.ಪಂಚಾಯತ್ ಸಿಬ್ಬಂದಿ ವರ್ಗದ ಎಲ್ಲ ದಿನಗಳುಮನೆ ಬಾಗಿಲಿಗೆ ತೆರಳಿ ಕಂದಾಯ ಪಾವತಿಸಲುಮನವೊಲಿಸಿದರೂ ಬಾಕಿ ಪಾವತಿಸಲು ಇನ್ನಿಲ್ಲದ ನೆಪಹೇಳುತ್ತಿದ್ದರು. ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಗಳು ಕಂದಾಯ ಪಾವತಿಸಿದ್ದಾರೆ.
ಸಿಂದಗಿ ತಾಲೂಕು: ತಾಲೂಕಿನ 23 ಗ್ರಾಪಂಗಳಲ್ಲಿ ಬಗಲೂರ ಗ್ರಾಪಂ 26840 ರೂ., ಬಮ್ಮನಹಳ್ಳಿ 53301 ರೂ., ಬ್ಯಾಕೋಡ 1.65 ಲಕ್ಷ ರೂ., ಚಟ್ಟರಕಿ 74532 ರೂ., ದೇವಣಗಾಂವ97755 ರೂ., ದೇವರನಾವದಗಿ 60560 ರೂ., ಗಬಸಾವಳಗಿ 1.04 ಲಕ್ಷ ರೂ.,ಗೋಲಗೇರಿ 88440 ರೂ.,ಗುಬ್ಬೇವಾಡ 1.95 ಲಕ್ಷರೂ., ಹಂದಿಗನೂರ 81394ರೂ., ಹಿಕ್ಕಣಗುತ್ತಿ 92060ರೂ., ಹೊನ್ನಳ್ಳಿ 1.26 ಲಕ್ಷರೂ., ಕಡಣಿ 45350 ರೂ.,ಕಕ್ಕಳಮೇಲಿ 86212 ರೂ., ಕೊಕಟನೂರ 3.35 ಲಕ್ಷ ರೂ., ಕೊರಹಳ್ಳಿ 1.32 ಲಕ್ಷ ರೂ., ಮಲಘಾಣ 1.67 ಲಕ್ಷ ರೂ., ಮೊರಟಗಿ 38537 ರೂ., ನಾಗಾವಿ ಬಿ.ಕೆ. 95386ರೂ., ರಾಮನಹಳ್ಳಿ 71823 ರೂ., ರಾಂಪುರ ಪಿ.ಎ. 2ಲಕ್ಷ ರೂ., ಸುಂಗಠಾಣ 62 ಸಾವಿರ ರೂ., ಯಂಕಂಚಿ 2.64 ಲಕ್ಷ ರೂ. ಹೀಗೆ ಒಟ್ಟು 26.62 ಲಕ್ಷ ರೂ. ತೆರಿಗೆ ಸಂಗ್ರಹಿಸಿವೆ.
ದೇವರಹಿಪ್ಪರಗಿ ತಾಲೂಕು: ತಾಲೂಕಿನ 14 ಗ್ರಾಪಂಗಳಲ್ಲಿ ಚಿಕ್ಕರೂಗಿ ಗ್ರಾಪಂ 29500 ರೂ., ಹರನಾಳ 1.13 ಲಕ್ಷ ರೂ., ಹಿಟ್ನಳ್ಳಿ 1.38 ಲಕ್ಷ ರೂ.,ಹುಣಶ್ಯಾಳ 1.78 ಲಕ್ಷ ರೂ., ಜಾಲವಾದ 95439ರೂ., ಕೆರೂಟಗಿ 2.41 ಲಕ್ಷ ರೂ., ಕೊಂಡಗೂಳಿ 2.41ಲಕ್ಷ ರೂ., ಕೋರವಾರ 67311 ರೂ., ಮಣೂರ2.30 ಲಕ್ಷ ರೂ., ಮಾರಕಬ್ಬಿನಹಳ್ಳಿ 10224 ರೂ.,ಮುಳಸಾವಳಗಿ 2.06 ಲಕ್ಷ ರೂ., ಸಾತಿಹಾಳ 19600ರೂ., ಯಾಳವಾರ 9148 ರೂ., ಯೆಲಗೋಡ35249 ರೂ. ಹೀಗೆ ಒಟ್ಟು 16.12 ಲಕ್ಷ ರೂ. ತೆರಿಗೆ ಸಂಗ್ರಹಿಸಿವೆ.
ಗ್ರಾಪಂಚುನಾವಣೆಹಿನ್ನೆಲೆಯಲ್ಲಿ ತೆರಿಗೆ ಬಾಕಿಪಾವತಿಸಿದ ರೀತಿಯಲ್ಲೇಉಳಿದ ಸಾರ್ವಜನಿಕರು ಅವರ ಬಾಕಿ ತೆರಿಗೆ ಹಣ ಪಾವತಿಸಿದಲ್ಲಿ ಗ್ರಾಮದಅಭಿವೃದ್ಧಿಗೆ ಸಹಕಾರಿ ಆಗಲಿದೆ. –
ಸುನೀಲ ಮದ್ದಿನ, ತಾಪಂ ಇಒ ಸಿಂದಗಿ ಮತ್ತು ದೇವರಹಿಪ್ಪರಗಿ
ಸರಕಾರದ ಯಾವುದೇ ಸವಲತ್ತು ಪಡೆಯುವ ಫಲಾನುಭವಿಗಳು ತೆರಿಗೆ ಪಾವತಿಸುವುದು ಕಡ್ಡಾಯ ಎಂದುಮಾಡಿದಲ್ಲಿಪಂಚಾಯತ್ ಆರ್ಥಿಕ ಸದೃಢ ಹೊಂದಲಿದೆ.
-ಅಮೋಘಿ ಹಿರೇಕುರಬರ ಚುನಾವಣಾಧಿಕಾರಿ, ಸುಂಗಠಾಣ ಗ್ರಾಪಂ
-ರಮೇಶ ಪೂಜಾರ