Advertisement

ಜನಪ್ರತಿನಿಧಿಗಳ ವಿರುದ್ಧ 4,122 ಕೇಸು ಇತ್ಯರ್ಥಕ್ಕೆ ಬಾಕಿ

09:15 AM Dec 05, 2018 | Team Udayavani |

ಹೊಸದಿಲ್ಲಿ: ದೇಶದಲ್ಲಿ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧ ಬರೋಬ್ಬರಿ 4,122 ಕ್ರಿಮಿನಲ್‌ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ ಎಂದು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. 4,122ರ ಪೈಕಿ 2,324 ಕೇಸುಗಳು ಹಾಲಿ ಶಾಸಕರು ಮತ್ತು ಸಂಸದರ ವಿರುದ್ಧವಿದ್ದು, ಉಳಿದ 1,675 ಕೇಸುಗಳು ಮಾಜಿ ಜನಪ್ರತಿನಿಧಿಗಳ ವಿರುದ್ಧ ದಾಖಲಾದವುಗಳು. ಅಲ್ಲದೆ, ಇವುಗಳ ಪೈಕಿ 30 ವರ್ಷಗಳಷ್ಟು ಹಳೆಯ ಪ್ರಕರಣಗಳೂ ಸೇರಿವೆ ಎಂದು ಹಿರಿಯ ನ್ಯಾಯವಾದಿ ಹಾಗೂ ಅಮಿಕಸ್‌ ಕ್ಯೂರಿ ಆಗಿರುವ ವಿಜಯ್‌ ಹನ್ಸಾರಿಯಾ ಅವರು  ಸುಪ್ರೀಂಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.

Advertisement

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ತ್ವರಿತ ಇತ್ಯರ್ಥಗೊಳಿಸಲು ವಿಶೇಷ ಕೋರ್ಟ್‌ ಸ್ಥಾಪನೆಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್‌, ಇಂಥ ಪ್ರಕರಣಗಳ ವರದಿ ನೀಡುವಂತೆ ಅಮಿಕಸ್‌ ಕ್ಯೂರಿಗೆ ನಿರ್ದೇಶಿಸಿತ್ತು. ಅದರಂತೆ, ಮಂಗಳವಾರ ವರದಿ ಸಲ್ಲಿಕೆಯಾಗಿದೆ. ವಿಶೇಷ ಕೋರ್ಟ್‌ ಸ್ಥಾಪನೆಗೆ ಕೋರಿ ಹಾಗೂ ದೋಷಿ ಎಂದು ಸಾಬೀತಾದವರಿಗೆ ಚುನಾವಣೆಗೆ ಸ್ಪರ್ಧಿಸಲು ಜೀವಿತಾವಧಿ ನಿಷೇಧ ಹೇರುವಂತೆ ಕೋರಿ ವಕೀಲ ಅಶ್ವಿ‌ನಿ ಉಪಾಧ್ಯಾಯ ಅವರು ಪಿಐಎಲ್‌ ಸಲ್ಲಿಸಿದ್ದರು. ವಿಚಾರಣೆ ವೇಳೆ, ಬಿಹಾರ ಮತ್ತು ಕೇರಳದ ಪ್ರತಿ ಜಿಲ್ಲೆಯಲ್ಲೂ ವಿಶೇಷ ಕೋರ್ಟ್‌ ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ಬಿಎಸ್‌ವೈ ವಿರುದ್ಧ 18 ಕೇಸು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ 18 ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ. ಈ ಪೈಕಿ 14 ಕೇಸುಗಳು ಜೀವಾವಧಿ ಶಿಕ್ಷೆಗೆ ಒಳಗಾಗುವಂಥದ್ದು ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next