Advertisement

41 ಸಾವಿರ ದಾಟಿದ ಹಳದಿ ಲೋಹ

11:22 AM Jan 05, 2020 | mahesh |

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಪರಿಣಾಮ ಭಾರತದಲ್ಲಿ ಚಿನ್ನದ ದರ 41 ಸಾವಿರ ರೂ. ದಾಟಿದೆ. ಸಾರ್ವಕಾಲಿಕ 850 ರೂ.ಗಳು ಏರಿಕೆಯಾಗಿ 10 ಗ್ರಾಂ ಚಿನ್ನಕ್ಕೆ 41,280 ರೂ.ಗೆ ವಹಿವಾಟು ನಡೆಸಿದೆ. ಮಧ್ಯಪ್ರಾಚ್ಯ ರಾಷ್ಟ್ರದಲ್ಲಿನ ಯುದ್ಧದ ಕಾರ್ಮೋಡದಿಂದ ದರ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಚಿನ್ನದ ಬೆಲೆ ಶೇ.1.10ರಷ್ಟು ಹೆಚ್ಚಳವಾಗಿದ್ದರೆ, 1 ಕೆಜಿ ಬೆಳ್ಳಿಯ ಬೆಲೆಯಲ್ಲಿ ಶೇ. 0.83ರಷ್ಟು ಏರಿಕೆ ಯಾಗಿದೆ.

Advertisement

ಚಿನ್ನ (ನ) ಮತ್ತು ಅಮೆರಿಕ
ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶಗಳಾದ ಅಮೆರಿಕ, ಚೀನ ನಡುವೆ ವಾಣಿಜ್ಯ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಿದೆ. ಅಮೆರಿಕ – ಚೀನ ನಡುವಿನ ವ್ಯಾಪಾರ ಸಮರ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದ್ದು ಡಾಲರ್‌ ಬದಲು ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿದೆ.

ಫೆಡರಲ್‌ ಬ್ಯಾಂಕ್‌ ನಡೆ?
ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಕಡಿತಗೊಳಿಸುತ್ತದೆ. ಭಾರತದಲ್ಲಿ ಹೇಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಇದೆಯೋ ಅದೇ ರೀತಿ ಅಮೆರಿಕದ ಫೆಡರಲ್‌ ರಿಸರ್ವ್‌ ಇದೆ. ದಶಕದ ಬಳಿಕ ಫೆಡರಲ್‌ ರಿಸರ್ವ್‌ ಬಡ್ಡಿದರವನ್ನು ಇಳಿಕೆ ಮಾಡಿದೆ. ಹಿಂದೆ ಜಾಗತಿಕ ಆರ್ಥಿಕ ಹಿಂಜರಿತವಾದಾಗ ಬಡ್ಡಿದರವನ್ನು ಇಳಿಕೆ ಮಾಡಿತ್ತು. ಜಾಗತಿಕವಾಗಿ ಆರ್ಥಿಕ ಕುಸಿತವಾಗುವ ಭೀತಿಯಿಂದ ಫೆಡರಲ್‌ ರಿಸರ್ವ್‌ ಬಡ್ಡಿ ದರ ಇಳಿಸಿರಬಹುದು ಎಂದು ಊಹಿಸಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿ¨ªಾರೆ.

ಇರಾನ್‌ ಕಾರ್ಮೋಡ
ಅಮೆರಿಕ ಮತ್ತು ಇರಾನ್‌ ನಡುವಿನ ರಾಜಕೀಯ ವಿದ್ಯಮಾನಗಳು ಇದಕ್ಕೆ ಕಾರಣವಾಗಿವೆ. ಅಮೆರಿಕ ಇರಾನ್‌ನ ಸೇನಾ ಪ್ರಮುಖರನ್ನು ಹತ್ಯೆ ಮಾಡಿದ್ದು, ಜಾಗತಿಕವಾಗಿ ಯುದ್ಧದ ಭೀತಿ ಆವರಿಸಿದೆ. ಪರಿಣಾಮವಾಗಿ ಇಂಧನ ಮತ್ತು ಚಿನ್ನ ದುಬಾರಿಯಾಗಿದೆ.

10 ವರ್ಷಗಳಲ್ಲಿ ದ್ವಿಗುಣ
ಚಿನ್ನ ದಶಕಗಳಿಂದ ಹಲವು ಕಾರಣಕ್ಕೆ ದುಬಾರಿಯಾಗುತ್ತಾ ಬಂದಿದೆ. 2000ನೇ ಇಸವಿಯಲ್ಲಿ 4,400 ರೂ.ಗಳಿದ್ದು, 2010ರಲ್ಲಿ 18,500 ರೂ.ಗಳಿಗೆ ಏರಿಕೆಯಾಗಿತ್ತು. ಆದರೆ ಇದೀಗ 41 ಸಾವಿರ ರೂ. ದಾಟಿದ್ದು ಸಾರ್ವಕಾಲಿಕವಾಗಿದೆ.

Advertisement

ಭಾರತಕ್ಕೆ ಭಾರಿ ಹೊಡೆತ
ಭಾರತೀಯರು ಸಂಪೂರ್ಣವಾಗಿ ಚಿನ್ನದ ಆಮದು ಮೇಲೆ ಅವಲಂಬಿತರಾಗಿದ್ದಾರೆ. ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಯ ನೇರ ಪರಿಣಾಮವನ್ನು ಎದುರಿಸಬೇಕಾಗಿದೆ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಚಿನ್ನ ಆಮದು ಮಾಡುವ ದೇಶವಾಗಿದೆ. ಆದರೆ ಕೆಲವು ವರ್ಷಗಳಿಂದ ಚಿನ್ನದ ಆಮದು ಪ್ರಮಾಣ ಕಡಿಮೆಯಾಗಿದೆ. 2019ರಲ್ಲಿ ಭಾರತ 831 ಟನ್‌ ಚಿನ್ನವನ್ನು ಆಮದು ಮಾಡಿಕೊಂಡಿದೆ. ಆದರೆ 2018ರಲ್ಲಿ 944 ಟನ್‌ ಚಿನ್ನ ಆಮದಾಗಿತ್ತು ಎಂಬುದು ಗಮನಾರ್ಹ.

ಉದ್ಯಮದಲ್ಲಿ ಕುಸಿತ
ದಿನದಿಂದ ದಿನಕ್ಕೆ ಚಿನ್ನ ದುಬಾರಿಯಾಗುತ್ತಿದ್ದು, ಇದು ದೇಶೀಯ ಆಭರಣ ಉದ್ಯಮದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹೇಳಲಾ ಗುತ್ತಿದೆ. ಈ ದರ ಏರಿಕೆಯಿಂದ ಬೇಡಿಕೆ ಕಡಿಮೆಯಾಗಿ ಶೇ. 6ರಿಂದ 8ರಷ್ಟು ಆಮದು ಕಡಿಮೆಯಾಗಲಿದ್ದು, ಇದರಿಂದ ಉದ್ಯಮಕ್ಕೆ ಹೊಡೆತ ಬೀಳಲಿದೆ.

45,000
2020ರಲ್ಲಿ ಚಿನ್ನದ ಸರಾಸರಿ ದರ 45 ಸಾವಿರ ದಾಟುವ ಸಾಧ್ಯತೆ ಇದೆ. ಈ ನಿರೀಕ್ಷೆಗೆ ಪುಷ್ಟಿ ನೀಡುವಂತೆ ಕೆಲವೊಂದು ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳು ನಡೆಯುತ್ತಿದ್ದು, ಅವುಗಳು ಭಾರತದ ಮೇಲೆ ನೇರ ಪರಿಣಾಮ ಬೀರುತ್ತಿವೆ. 2019ರ ಬಳಿಕ ಚಿನ್ನದ ದರದಲ್ಲಿ ಶೇ. 25ರಷ್ಟು ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next