Advertisement

Vidhan Parishad: ಮೇಲ್ಮನೆಯಲ್ಲಿ 4,078.85 ಕೋ. ರೂ. ಪೂರಕ ಅಂದಾಜು

09:42 AM Feb 23, 2024 | Team Udayavani |

ಬೆಂಗಳೂರು: 2023-24ನೇ ಸಾಲಿನಲ್ಲಿ ಅನುಮೋದನೆ ಪಡೆದಿದ್ದ ಬಜೆಟ್‌ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಖರ್ಚು ಮಾಡಿದ ಮತ್ತು ಮಾಡಬೇಕಾದ 4,078.85 ಕೋ. ರೂ. ಪೂರಕ ಅಂದಾಜನ್ನು ವಿಧಾನ ಪರಿಷತ್ತಿನಲ್ಲಿ ಗುರುವಾರ ಮಂಡಿಸಲಾಯಿತು.

Advertisement

ಒಟ್ಟಾರೆ 4,078.85 ಕೋ. ರೂ.ಯಲ್ಲಿ 530.79 ಕೋಟಿ ರೂ. ಅನ್ನು ಕೇಂದ್ರ ಸಹಾಯಕ್ಕೆ ಸಂಬಂಧಿಸಿದ್ದ ಯೋಜನೆಗಳಿಗೆ ನೀಡಲಾಗಿದೆ. ಜತೆಗೆ ವಿವಿಧ ಇಲಾಖೆಗಳಲ್ಲಿನ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್‌ ಸಿಎಸ್‌ಪಿ-ಟಿಎಸ್‌ಪಿ) ಅಡಿ ಹೆಚ್ಚು ವರಿ ಅನುದಾನ ಕಲ್ಪಿಸಲಾಗಿದೆ. ಇದಲ್ಲದೆ, ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಯ ಶಕ್ತಿ, ಕೃಷಿ ಮತ್ತು ತೋಟಗಾರಿಕೆ, ಶಿಕ್ಷಣ, ಮೂಲ ಸೌಕರ್ಯ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌, ಪಶುಸಂಗೋಪನೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹೆಚ್ಚುವರಿ ಮೊತ್ತ ನೀಡಲಾಗಿದೆ.

ಪ್ರಮುಖ ವಿವರ:

  • ವಿಧಾನಸಭೆ ವಿಪಕ್ಷ ನಾಯಕರು ಮತ್ತು ಸರಕಾರಿ ಮುಖ್ಯ ಸಚೇತಕರಿಗೆ ಹೊಸ ವಾಹನ ಖರೀದಿಗೆ 70.50 ಲಕ್ಷ ರೂ.
  • ಶಕ್ತಿ ಯೋಜನೆ ಅನುಷ್ಠಾನಕ್ಕಾಗಿ ಸಾರಿಗೆ ನಿಗಮಗಳಿಗೆ 400 ಕೋಟಿ ರೂ.
  • 50 ಸಾವಿರ ರೂ.ವರೆಗಿನ ಅಲ್ಪಾವಧಿ ಬೆಳೆ ಸಾಲ ಮನ್ನಾ ಯೋಜನೆ ಅಡಿ ಬಾಕಿ ಉಳಿದಿರುವ ಮೊತ್ತ ಬಿಡುಗಡೆ ಮಾಡಲು 131.30 ಕೋ. ರೂ.
  • ಒಲಿಂಪಿಕ್‌ ಮಾದರಿ ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ 5 ಕೋ.ರೂ.
  • 15ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ 5 ಕೋ. ರೂ.
  • ಹಂಪಿ ಉತ್ಸವಕ್ಕಾಗಿ 8 ಕೋ. ರೂ.
  • ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಕಾಮಗಾರಿಯ ಬಾಕಿ ಬಿಲ್‌ ಪಾವತಿಸಲು 50 ಕೋ. ರೂ.
  • ಬಿಎಂಆರ್‌ಸಿಎಲ್‌ ನಗದು ನಷ್ಟದ ಮೊತ್ತದ ಅನುದಾನದ ಕೊರತೆ ಸರಿದೂಗಿಸಲು 85.63 ಕೋಟಿ ರೂ.
Advertisement

Udayavani is now on Telegram. Click here to join our channel and stay updated with the latest news.

Next