ಹೊಸದಿಲ್ಲಿ: ಸಂಸತ್‌ನಲ್ಲಿ ಬಿಜೆಪಿಯನ್ನು ಎದುರಿಸಲು 40 ಸಂಸದರಿದ್ದರೆ ಸಾಕು. ಈ ಬಾರಿ ನಾವು 52 ಮಂದಿ ಇದ್ದೇವೆ. ಪ್ರತಿ ದಿನವೂ ಬಿಜೆಪಿಯೊಂದಿಗೆ ಹೋರಡಬಹುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯ ಸಂಸತ್ ಭವನದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಹುಲ್‌ಗಾಂಧಿ ಪಕ್ಷದ ಸಂಸದರಿಗೆ ಉತ್ಸಾಹ ತುಂಬುವ ಯತ್ನ ಮಾಡಿದರು.
ನೀವು ಪ್ರತಿಯೊಬ್ಬ ಭಾರತೀಯನ ಹಕ್ಕಿಗಾಗಿ ಹೋರಾಟ ಮಾಡಬೇಕಿದೆ. ನಿಮಗೆ ಸಂಸತ್‌ನಲ್ಲಿ ಸಮಯ ಸಾಕಾಗದೇ ಇರಬಹುದು ಆದರೆ 2 ನಿಮಷಗಳು ಸಾಕು ಬಿಜೆಪಿಯನ್ನು ಕೆಳಗೆ ಹಾಕಲು ಎಂದರು.
ಚುನಾವಣೆಯ ಸೋಲಿನ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್ ಗಾಂಧಿ ಮುಂದಾಗಿದ್ದರು.
ಶುಕ್ರವಾರ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕಿಯಾಗಿ ಸೋನಿಯಾ ಗಾಂಧಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸೋನಿಯಾ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಬಲವಾದ ಮತ್ತು ಪರಿಣಾಮಕಾರಿ ವಿಪಕ್ಷವಾಗಿ ಕೆಲಸ ಮಾಡಲಿದೆ. ನಾವು ನಮ್ಮ ಸಂವಿಧಾನದ ರಕ್ಷಣೆಗಾಗಿ ಕೆಲಸ ಮಾಡುತ್ತೇವೆಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.