Advertisement
ಮಾರ್ಚ್ 2020 ರಿಂದ ಭಾರತದಲ್ಲಿ ಲಾಕ್ ಡೌನ್ ನಿರ್ಬಂಧಗಳಿದ್ದು, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಸೈಕ್ಲಿಂಗ್ ನಲ್ಲಿ ಉತ್ಸಾಹವನ್ನು ಹೆಚ್ಚಿಸಲು ಕಾರಣವಾಗಿದೆ. ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದ್ದರಿಂದ, ಸೈಕ್ಲಿಂಗ್ ಕಡಿಮೆ ದೂರದ ಪ್ರಯಾಣಕ್ಕೆ ವೈಯಕ್ತಿಕ, ಕೋವಿಡ್-ಸುರಕ್ಷಿತ ಪರ್ಯಾಯವೆಂದು ಸಾಬೀತಾಗಿದೆ.
Related Articles
Advertisement
ಪೋಸ್ಟ್ ಮ್ಯಾನ್ ಗಳು, ಮಹಿಳೆಯರು, ಮಕ್ಕಳು ಇತರರನ್ನು ಒಳಗೊಂಡು ಭಾರತೀಯ ನಗರಗಳನ್ನು ಸೈಕ್ಲಿಂಗ್ ಸ್ನೇಹಿಯನ್ನಾಗಿ ಮಾಡುವ ಪ್ರಯತ್ನಗಳು ನಾಗರಿಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆಯೊಂದನ್ನು ಮಾಡಲಾಯಿತು. ಭಾರತದಾದ್ಯಂತ ಸುಮಾರು 60,000 ಜನರನ್ನು ಸಮೀಕ್ಷೆ ಮಾಡಲಾಗಿದೆ.
ನಾಸಿಕ್, ಬೆಂಗಳೂರು ಮತ್ತು ನ್ಯೂ ಟೌನ್ ಕೋಲ್ಕತಾ ಪ್ರದೇಶಗಳಲ್ಲಿ ಮಧ್ಯಮ ವಯಸ್ಸಿನ ಮಹಿಳೆಯರನ್ನೊಳಗೊಂಡು ಸೈಕ್ಲಿಂಗ್ ನನ್ನು ಒಪ್ಪಿಕೊಂಡಿದ್ದು, ಇದು ಸುಕ್ಷಿತ ಹಾಗೂ ಕಡಿಮೆ ವೆಚ್ಚದಾಯಕ ಎಂದು ಅಭೀಪ್ರಾಯ ಪಟ್ಟಿರುವುದಾಗಿ ಸಮೀಕ್ಷಾ ವರದಿ ತಿಳಿಸಿದೆ.
ಬಾರ್ಸಿಲೋನಾ ಮತ್ತು ಲಂಡನ್ ಗಳಲ್ಲಿ ಸೈಕ್ಲಿಂಗ್ ಗೆ ಉತ್ತೇಜನ :
ದೇಶದಲ್ಲಿ ಕೆಲವು ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಸೈಕಲ್ ಗಳನ್ನು ನೀಡುವುದರ ಮೂಲಕ ಕೋವಿಡ್ ನಿಯಂತ್ರಣದ ಕಾಳಜಿಯನ್ನು ವಹಿಸಿವೆ. ಮಾತ್ರವಲ್ಲದೇ, ಬಾರ್ಸಿಲೋನಾ ಮತ್ತು ಲಂಡನ್ ಗಳಲ್ಲಿ, ವಾಯು ಮಾಲಿನ್ಯವನ್ನು ತಡೆಟ್ಟುವ ಉದ್ದೇಶದಿಂದ ಹಾಗೂ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಣ ಮಾಡಲು ಸೈಕ್ಲಿಂಗ್ ಗೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ತಿಳಿಸಿದೆ.
ಕಡಿಮೆ ದೂರದ ಪ್ರಯಾಣಕ್ಕೆ ಸೈಕ್ಲಿಂಗ್ ಮಾಡುವುದರಿಂದ ಭಾರತೀಯ ಆರ್ಥಿಕತೆಗೆ ವಾರ್ಷಿಕ 1.8 ಟ್ರಿಲಿಯನ್ ಲಾಭವಾಗುತ್ತದೆ. ಮತ್ತು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಶ್ವಾಸಾರ್ಹ ಪರಿಹಾರವಾಗಿದೆ ಎಂದು ಸಹ ಸಮೀಕ್ಷೆ ವರದಿ ತಿಳಿಸಿದೆ.
ಇನ್ನು, 2020 ರಲ್ಲಿ, ಭಾರತದಲ್ಲಿ ಸೈಕಲ್ ಮಾರಾಟವು ಶೇಕಡಾ 20 ರಷ್ಟು ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿ ಹೇಳುತ್ತದೆ.
ಇದನ್ನೂ ಓದಿ : ವಾಟ್ಸಾಪ್ ಗೆ ಟಕ್ಕರ್ ನೀಡಲಿದೆಯೇ ಭಾರತ ಸರ್ಕಾರದ ‘ಸಂದೇಶ್’