Advertisement

Congress 40 ಶಾಸಕರು ಹೊರಕ್ಕೆ ಖಚಿತ: ನಳಿನ್‌ ಕುಮಾರ್‌ ಕಟೀಲು

11:15 PM Nov 21, 2023 | Team Udayavani |

ಮಂಗಳೂರು: ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದ್ದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮತ್ತು ಜಾರಕಿಹೊಳಿ ತಂಡ ಇಬ್ಭಾಗವಾಗುತ್ತಿದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ನ 30-40 ಶಾಸಕರು ಹೊರಗೆ ಬರಲಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಕಚ್ಚಾಟದ ನಡುವೆಯೇ ಮರಿಖರ್ಗೆ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಡುತ್ತಿದ್ದಾರೆ. ಹಸ್ತದ ಒಳಗೆ ಹಸ್ತದ ಆಪರೇಷನ್‌ ಆಗುತ್ತಿದೆ. ಈ ಭಯದಿಂದ ಕಾಂಗ್ರೆಸ್‌ನವರು ಬಿಜೆಪಿಯಿಂದ ಬರುತ್ತಾರೆ ಎನ್ನುತ್ತ ದಾರಿ ತಪ್ಪಿಸುತ್ತಾ ಇದ್ದಾರೆ. ಯಾವುದೇ ಕಾರಣಕ್ಕೆ ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ. ಬೆಳಗಾವಿ ಅಧಿವೇಶನ ಮುಗಿದ ಕೂಡಲೇ ಕಾಂಗ್ರೆಸ್‌ನಲ್ಲಿ ದೊಡ್ಡ ಪರಿವರ್ತನೆ ಆಗುತ್ತದೆ ಎಂದರು.

ಮುಖ್ಯಮಂತ್ರಿ ಹುದ್ದೆಗೆ ಹತ್ತಾರು ಟವಲ್‌ಗ‌ಳು ಬಿದ್ದಿವೆ. ಜಾರಕಿಹೊಳಿ, ಪರಮೇಶ್ವರ್‌ ಜತೆಗೆ ದಲಿತ ಸಿಎಂ ಕಾರ್ಡ್‌ ಹೊರಟಿದೆ. ಪ್ರಿಯಾಂಕ್‌ ಖರ್ಗೆ, ಡಿಕೆಶಿ ಎಲ್ಲರೂ ಹೊರಟ ಕಾರಣ ಸರಕಾರ ಬೀಳಬಹುದು. ಸರಕಾರ ಟೇಕಾಫ್‌ ಆಗ್ತಾ ಇಲ್ಲ, ಅಭಿವೃದ್ಧಿ ಕಾರ್ಯ ಕೂಡ ಆಗುತ್ತಿಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟಿxದೆ, ನಾಲ್ಕು ತಿಂಗಳಲ್ಲಿ 300 ರೈತರ ಆತ್ಮಹತ್ಯೆ ಆಗಿದೆ. ಉಡುಪಿಯಲ್ಲಿ ಹಾಡಹಗಲೇ ನಾಲ್ವರ ಹತ್ಯೆ ನಡೆದಿದೆ. ಬರ ನಿಯಂತ್ರಣ ಆಗಿಲ್ಲ ಎಂದರು.

ಮೋದಿ ಸರಕಾರ ಕೊಟ್ಟ ಅನುದಾನದಲ್ಲಿ ರಾಜ್ಯದಲ್ಲಿ ಕೆಲಸ ನಡೆಯುತ್ತಿದೆ. ರಾಜ್ಯದಿಂದ ಬಿಡಿಗಾಸು ಬಿಡಗಡೆಯಾಗಿಲ್ಲ. ಈ ಸರಕಾರ ಭ್ರಷ್ಟಾಚಾರದ ಸರಕಾರ, ಅಧಿಕಾರಿಗಳ ಸಂಬಳ ಕೊಡಲು ಕೂಡ ಹಣ ಇಲ್ಲ, ಮೂರ್ನಾಲ್ಕು ತಿಂಗಳು ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆ ಎಂದರು.

ವಿಜಯೇಂದ್ರಗೆ ಸ್ವಾಗತ
ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಅವರನ್ನು ವಿಮಾನ ನಿಲ್ದಾಣದಿಂದ ಸ್ವಾಗತಿಸುತ್ತೇವೆ. ಮೆರವಣಿಗೆ ಸಿ.ವಿ. ನಾಯಕ್‌ ಹಾಲ್‌ನಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next