Advertisement

ಲಂಚ ಪ್ರಕರಣ: ಮಹಿಳಾ ಪೊಲೀಸ್ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ; 5 ಸಾವಿರ ದಂಡ

11:13 AM Dec 09, 2020 | sudhir |

ಕಲಬುರಗಿ: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

Advertisement

ವಿಜಯಲಕ್ಷ್ಮಿ ಮಸಾರೆ ಎಂಬುವವರೇ ಜೈಲು ಶಿಕ್ಷೆಗೆ ಗುರಿಯಾದವರು. ಇವರು ಶಹಾಬಾದ್ ಠಾಣೆ ಇನ್ಸ್ ಪೆಕ್ಟರ್ ಆಗಿದ್ದಾಗ 2015ರಲ್ಲಿ ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ ವಾಹನ ಬಿಡುಗಡೆಗೆ 25 ಸಾವಿರ ರೂ.‌ ಹಣದ ಬೇಡಿಕೆ ಇಟ್ಟಿದ್ದರು. ಈ ವೇಳೆ ವಾಹನ ಮಾಲೀಕ ನೀಡಿದ ದೂರಿನ ಮೇರೆಗೆ ಕಲಬುರಗಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾ. ಆರ್.ಜೆ.ಸತೀಶ್ ಸಿಂಗ್ ಅವರು ಲಂಚ ಪ್ರತಿಬಂಧಕ ಕಾಯ್ದೆಗಳಡಿ 4 ವರ್ಷ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳು ಶಿಕ್ಷೆ ಅನುಭವಿಸಬೇಕೆಂದೂ ಆದೇಶಿಸಿದ್ದಾರೆ.

ಇದನ್ನೂ ಓದಿ:ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ಕಿರುತೆರೆ ನಟಿ, ನಿರೂಪಕಿ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ

ಪ್ರಕರಣದ ಹಿನ್ನೆಲೆ: 2015ರ ಡಿಸೆಂಬರ್‌ನಲ್ಲಿ ಶಹಾಬಾದ್ ತಾಲೂಕಿನ ದೇವನ ತೆಗನೂರಿನ ರಾಜು ಎಂಬುವವರು ಶಹಾಬಾದ್‌ನ ಬಂಕ್‌ವೊಂದರಲ್ಲಿ ತಮ್ಮ ಟಾಟಾ ಸುಮೊ ವಾಹನಕ್ಕೆ ಡೀಸೆಲ್ ಹಾಕಿಸಲು ಹೋಗಿದ್ದರು. ಈ ಸಮಯದಲ್ಲಿ ಬಂಕ್‌ನ ಸಿಬ್ಬಂದಿಯೊಂದಿಗೆ ಜಗಳವಾಗಿತ್ತು.

Advertisement

ಈ ಬಗ್ಗೆ ಬಂಕ್‌ನ ಸಿಬ್ಬಂದಿ ರಾಜು ವಿರುದ್ಧ ಶಹಾಬಾದ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ರಾಜುವನ್ನು ಬಂಧಿಸಿ, ಅವರ ವಾಹನವನ್ನು ಜಪ್ತಿ ಮಾಡಿದ್ದರು. ಜಾಮೀನು ಮೇಲೆ ಬಿಡುಗಡೆಯಾಗಿದ್ದ ರಾಜು, ವಾಹನವನ್ನು ಬಿಡಿಸಿಕೊಳ್ಳಲು ಠಾಣೆಗೆ ಹೋಗಿದ್ದರು. ಆಗ ವಿಜಯಲಕ್ಷ್ಮಿ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಸದ್ಯ ವಿಜಯಲಕ್ಷ್ಮಿ ನಾಗರಿಕ ಹಕ್ಕು ಜಾರಿ (ಸಿಆರ್‌ಇ) ಘಟಕದಲ್ಲಿ ಡಿವೈಎಸ್ ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ಪರ ಸರ್ಕಾರಿ ಅಭಿಯೋಜಕ ಅಶೋಕ ಶಿವಪ್ಪ ಚಾಂದಕವಟೆ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next