Advertisement
ಮೈಸೂರು ಕಡೆಯಿಂದ ಬರುವ ಭಕ್ತರು ಗಗೇಶ್ವರಿಯಿಂದ ಮುಂದೆ ಹೊಸದಾಗಿ ನಿರ್ಮಿಸಿರುವ ಸೇತುವೆ ಪಕ್ಕದ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ ನಂತರ ವಾಪಸ್ ಅಲ್ಲಿಂದ ಮೈಸೂರು ಕಡೆಗೆ ಸಂಚರಿಸುವುದು. ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಯಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಅಗ್ನಿಶಾಮಕ ಠಾಣೆ ಎದುರು ನಿರ್ಮಿಸಿರುವ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ, ನಂತರ ಅದೇ ಮಾರ್ಗದಲ್ಲಿ ವಾಪಸ್ಸಾಗುವುದು.
Related Articles
Advertisement
ಕೊಳ್ಳೇಗಾಲ, ಚಾಮರಾಜ ನಗರ, ತಲಕಾಡು ಹಾಗೂ ತಮಿಳುನಾಡು ಕಡೆಯಿಂದ ಮೈಸೂರಿಗೆ ಹೋಗುವ ವಾಹನಗಳು ಚಿಕ್ಕಮ್ಮ ತಾಯಿ ಛತ್ರದ ಬಳಿ ಎಡಕ್ಕೆ ತಿರುಗಿ ತಾಲೂಕು ಕಚೇರಿ ರಸ್ತೆ ವಿದ್ಯೋದಯ ವೃತ್ತದ ಮುಖಾಂತರ ಸುತ್ತೂರು, ವರುಣಾ ಮಾರ್ಗವಾಗಿ ಮೈಸೂರಿಗೆ ತೆರಳುವುದು.
ಬೆಂಗಳೂರು, ಮಂಡ್ಯ, ಮಳವಳ್ಳಿ, ಬನ್ನೂರಿನಿಂದ ಚಾಮರಾಜ ನಗರ, ಕೊಳ್ಳೇಗಾಲಕ್ಕೆ ಹೋಗುವ ವಾಹನಗಳು ಸೋಸಲೆ ಬಳಿ ಎಡಕ್ಕೆ ತಿರುಗಿ ದೊಡ್ಡೇಬಾಗಿಲು, ಪೂರಿಗಾಲಿ, ತಲಕಾಡು, ಮಾದಾಪುರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಸಂಚರಿಸುವುದು.
ಮಕ್ಕಳ ಜೇಬಲ್ಲಿ ಮಾಹಿತಿ ಚೀಟಿ ಇಡಿ: ಕುಂಭಮೇಳಕ್ಕೆ ಆಗಮಿಸುವ ಭಕ್ತರು ಜೊತೆಯಲ್ಲಿ ಚಿಕ್ಕಮಕ್ಕಳನ್ನು ಕರೆತಂದಲ್ಲಿ ಅವರ ಜೇಬಿನಲ್ಲಿ ಹೆಸರು, ವಿಳಾಸ ಮತ್ತು ಪೋಷಕರ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು ಇರಿಸುವುದು. ಪುಣ್ಯಸ್ನಾನ ಮಾಡುವ ಸಂದರ್ಭದಲ್ಲಿ ಪೋಷಕರು ಚಿಕ್ಕ ಮಕ್ಕಳು, ವೃದ್ಧರ ಬಗ್ಗೆ ಜಾಗೃತಿವಹಿಸಬೇಕು.
ಸ್ನಾನಘಟ್ಟಗಳ ಬಳಿ ನಿರ್ಮಿಸಿರುವ ಬ್ಯಾರಿಕೇಡ್‌ಗಳನ್ನು ದಾಟದಂತೆ ಸೂಚಿಸಿದೆ. ಮಹಿಳೆಯರು ತಮ್ಮ ಚಿನ್ನಾಭರಣಗಳು ಹಾಗೂ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಗಾವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ತಿಳಿಸಿದ್ದಾರೆ.