ನವದೆಹಲಿ : ಸೋಮವಾರ ಬೆಳ್ಳಂಬೆಳಗ್ಗೆ ದೆಹಲಿಯ ಜನನಿಬಿಡ ಪ್ರದೇಶವೊಂದರಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ.
ದೆಹಲಿಯ ಶಾಂತಿನಗರದಲ್ಲಿ ಬೆಳಗ್ಗೆ 8 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ, ಹೆಚ್ಚು ಜನ ಸಂಚಾರ ಇರುವ ಪ್ರದೇಶವಾಗಿದ್ದು ಇಲ್ಲಿ ಒಂದಕ್ಕೊಂದು ತಾಗಿಕೊಂಡಿರುವ ರೀತಿಯಲ್ಲೇ ಕಟ್ಟಡಗಳಿದ್ದು ಇದ್ದಕ್ಕಿದ್ದಂತೆ ಕಟ್ಟಡ ಕುಸಿದು ಬಿದ್ದಿದೆ.
ಪೊಲೀಸ್ ಅಧಿಕಾರಿಗಳ ಹೇಳಿಕೆಯಂತೆ ಬೆಳಿಗ್ಗೆ ಸುಮಾರು 8.45 ರ ಸುಮಾರಿಗೆ ಠಾಣೆಗೆ ಕಟ್ಟಡ ಬಿದ್ದಿರುವ ಕುರಿತು ಕರೆ ಬಂದಿದೆ, ಕೂಡಲೇ ಸಿಬ್ಬಂದಿಗಳೊಂದಿಗೆ ಘಟನಾ ಸ್ಥಳಕ್ಕೆ ಅಧಿಕಾರಿಗಳ ತಂಡ ಧಾವಿಸಿದೆ, ಇದೆ ವೇಳೆ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ, ಅದೃಷ್ಟವಶಾತ್ ಕಟ್ಟಡದಲ್ಲಿ ಯಾರು ಇರಲಿಲ್ಲ ಹಾಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡ ಕುಸಿದು ಬೀಳುವ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಟ್ಟಡ ಕುಸಿದು ಬೀಳುವ ಕೆಲವೇ ಸೆಕುಂಡುಗಳ ಮೊದಲು ಮಹಿಳೆಯರು ಈ ಕಟ್ಟಡದ ಎದುರೇ ಸಾಗಿದ್ದು ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಕಟ್ಟಡದ ಅವಶೇಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕನ್ನಡದ ಹಿರಿಯ ನಟ ಮನ್‌ದೀಪ್ ರಾಯ್ ಅವರಿಗೆ ಹೃದಯಾಘಾತ