Advertisement

ಲಿಂಗಾಯಿತ Politics: M.B.ಪಾಟೀಲ್‌ ಮೇಲೆ BSY ಸಿಟ್ಟಿಗೆ 4 ಕಾರಣಗಳು!

04:43 PM Jul 06, 2017 | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ನಡೆದಿರುವ ವಿಚಾರ ನಿಮಗೆ ತಿಳಿದಿದೆ. ಯಡಿಯೂರಪ್ಪ ಅವರು ಸಿಟ್ಟಾಗಲು 4 ಪ್ರಮುಖ ಕಾರಣಗಳನ್ನು ಪಾಟೀಲ್‌ ನೀಡಿದ್ದಾರೆ. 

Advertisement

ಗುರುವಾರ ಸುದ್ದಿಗೋಷ್ಠಿ ನಡೆಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ ಮಾತನಾಡಿದ  ಸಚಿವ ಎಂ.ಬಿ.ಪಾಟೀಲ್‌ ಯಡಿಯೂರಪ್ಪ ಅವರು ನನ್ನ ಮೇಲೆ ಸಿಟ್ಟಾಗಲು ನಾಲ್ಕು ಕಾರಣಗಳೆಂದರೆ 

1 .ಗುಂಡ್ಲುಪೇಟೆಯಲ್ಲಿ ಗೀತಾ ಮಹಾದೇವ್‌ ಪ್ರಸಾದ್‌ ಅವರ ಗೆಲುವು-ಇಲ್ಲಿ ಲಿಂಗಾಯತನಾದ ನಾನು ಭರ್ಜರಿ ಪ್ರಚಾರ ನಡೆಸಿ ಕಾಂಗ್ರೆಸ್‌ ಪಕ್ಷಕ್ಕೆ ಮತಗಳನ್ನು ಸೆಳೆದಿದ್ದೆ.

2.ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರಿಟ್ಟಿದ್ದು-ಇಲ್ಲೂ  ನನ್ನ ಪಾತ್ರ ಇದೆ,ನೀಡಿದ ಭರವಸೆಯಂತೆ ಹೆಸರಿಟ್ಟಿದ್ದು.

3 ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಹಾಕುವಂತೆ ಮಾಡಿದ್ದು-ಇದಕ್ಕೂ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ ,ಕೂಡಲೇ ಅವರು ಆದೇಶ ಮಾಡಿದ್ದರು. 

Advertisement

4.ಕೂಡಲ ಸಂಗಮದಲ್ಲಿ ಕಾಂಗ್ರೆಸ್‌ ಸಮಾವೇಶ ನಡೆಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌ ಅವರ ಪದಗ್ರಹಣ ನಡೆಸಿದ್ದು ,ಇಲ್ಲೂ ನಾನು ಕೆಲಸ ಮಾಡಿದ್ದೇನೆ. ಇದರಿಂದಾಗಿ ಯಡಿಯೂರಪ್ಪ ಸಿಟ್ಟಾಗಿದ್ದಾರೆ ಎಂದು ನನಗನ್ನಿಸುತ್ತಿದೆ ಎಂದಿದ್ದಾರೆ. 

ವಿಜಯಪುರದಲ್ಲಿ ಯಡಿಯೂರಪ್ಪ ಅವರು ಪಾಟೀಲ್‌ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಇದರ ವಿರುದ್ಧ ಕೆಂಡಾಮಂಡಲವಾಗಿದ್ದ ಪಾಟೀಲ್‌ ಏಕವಚನ ಪ್ರಯೋಗ ಸರಿಯಲ್ಲ ಬಣ್ಣ ಬಯಲು ಮಾಡುತ್ತೇನೆ ಎಂದು ಆರೋಪಿಸಿದ್ದರು. 

ಇಬ್ಬರ ನಡುವಿನ ವಾಕ್ಸಮರಕ್ಕೆ ಇದೀಗ ಜಾತಿ ಬಣ್ಣ ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next