Advertisement

Mangaluru ಹಾಸ್ಟೆಲ್‌ನಿಂದ 4 ಮೊಬೈಲ್‌ ಕಳವು

11:34 PM Sep 23, 2023 | Team Udayavani |

ಮಂಗಳೂರು: ನಗರದ ಬಂದರ್‌ನ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿ ನಿಲಯದಿಂದ ನಾಲ್ಕು ಮೊಬೈಲ್‌ ಫೋನ್‌ಗಳು ಕಳುವಾಗಿವೆ.

Advertisement

ಈ ಕುರಿತಂತೆ ಹಾಸ್ಟೆಲ್‌ ವಾರ್ಡನ್‌ ಸಂಗಮೇಶ್‌ ಎಂ. ಮಠ ಅವರು ಬಂದರು ಠಾಣೆಗೆ ದೂರು ನೀಡಿದ್ದಾರೆ. ಸೆ.21ರಂದು ನಿಲಯದಲ್ಲಿದ್ದ ವಿದ್ಯಾರ್ಥಿಗಳ ಪೈಕಿ ನಾಲ್ವರ ಮೊಬೈಲ್‌ ಪೋನ್‌ಗಳು ನಾಪತ್ತೆಯಾಗಿರುವ ಕುರಿತಂತೆ ವಿದ್ಯಾರ್ಥಿಗಳು ತಿಳಿಸಿದ್ದಾರೆ. ವಿದ್ಯಾರ್ಥಿ ನಿಲಯದ ಒಳಗಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಕಳವಾದ ಮೊಬೈಲ್‌ ಫೋನ್‌ಗಳ ಒಟ್ಟು ಮೌಲ್ಯ ಸುಮಾರು 30 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next