Advertisement

ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡಿ

05:51 PM Jul 13, 2021 | Team Udayavani |

ಚಿಂಚೋಳಿ: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಸರಕಾರ ನೈಸರ್ಗಿಕ ವಿಪತ್ತು ನಿರ್ವಹಣೆ 4 ಲಕ್ಷ ರೂ. ಪರಿಹಾರ ಹೆಚ್ಚಿಸಬೇಕು. ಬಿಜೆಪಿ ಸರಕಾರ ಕೊಡುತ್ತಿರುವ 1ಲಕ್ಷ ರೂ. ಧನ ಸಹಾಯ ಕೇವಲ ಕಣ್ಣೊರೆಸುವ ತಂತ್ರದಿಂದ ಕೂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್‌ ತಡೆಗೆಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಾಂಗ್ರೆಸ್‌ ಮಾಜಿ ಸಚಿವ ಡಾ|ಶರಣಪ್ರಕಾಶ ಪಾಟೀಲ ಆರೋಪಿಸಿದರು.

Advertisement

ಸೇಡಂ ವಿಧಾನಸಭಾ ಮತಕ್ಷೇತ್ರ ಸುಲೇಪೇಟ ಗ್ರಾಮದಲ್ಲಿ ಆರೋಗ್ಯ ಸಹಾಯ ಹಸ್ತ ಮತ್ತು ಕೋವಿಡ್‌ ಲಸಿಕೆ ಅಭಿಯಾನ ಜಾಗೃತಿ ಮನೆ ಮನೆಗೆ ಭೇಟಿ ನೀಡಿ ಜನರಿಗೆ ಕೋವಿಡ್‌ ಲಸಿಕೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಅನೇಕ ಜನರು ಜೀವ ಕಳೆದುಕೊಂಡಿದ್ದಾರೆ. ಆದರೆ ಆರೋಗ್ಯ ಇಲಾಖೆ ಸರಿಯಾದ ಅಂಕಿ ಅಂಶ ಕೊಡುತ್ತಿಲ್ಲ. ಮೊದಲ ಅಲೆ ಮತ್ತು 2ನೇ ಅಲೆಯಲ್ಲಿ ಸಾಕಷ್ಟು ಜನರು ಕೊರೊನಾದಿಂದ ಸಾವುಗಳಾಗಿವೆ. ಆದ್ದರಿಂದ 3ನೇ ಅಲೆ ಪ್ರಾರಂಭವಾಗುವ ಸಾಧ್ಯತೆಗಳು ಇದ್ದರೂ ಸಹ ಸರಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಜೀವ ಕಳೆದುಕೊಂಡ ಕುಟುಂಬಕ್ಕೆ ಸರ್ವೋತ್ಛ ನ್ಯಾಯಾಲಯ ನೀಡಿದ ಆದೇಶಕ್ಕೆ ಹೆದರಿ ಸರಕಾರ ಪರಿಹಾರ ಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಪ್ರತಿಯೊಬ್ಬರು ಕೋವಿಡ್‌ ಲಸಿಕೆ ಹಾಕಿಕೊಳ್ಳಬೇಕು. ನಮ್ಮ ಜೀವ ನಮ್ಮ ಕೈಯಲ್ಲಿ ನಮ್ಮ ಕುಟುಂಬದ ಸದಸ್ಯರ ಜೀವ ಉಳಿಸಿಕೊಳ್ಳಬೇಕಾಗಿದೆ. ಸುಲೇಪೇಟ ಹೋಬಳಿಯ 32 ಗ್ರಾಮಗಳಿಗೆ ಭೇಟಿ ನೀಡಿ ಕೊರೊನಾದಿಂದ ಮೃತಪಟ ಕುಟುಂಬಕ್ಕೆ 5 ಸಾವಿರ ರೂ.ಪರಿಹಾರ ಮತ್ತು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಲಾ 2 ಸಾವಿರ ಮತ್ತು ಸಹಾಯಕಿಯರಿಗೆ ಒಂದು ಸಾವಿರ ರೂ. ವೈಯಕ್ತಿಯವಾಗಿ ಪರಿಹಾರ ನೀಡಲಾಗುತ್ತಿದೆ ಎಂದರು.

ಕಾಂಗ್ರೆಸ್‌ ಸರಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕುಪನೂರ, ಗರಗಪಳ್ಳಿ, ಜಟ್ಟೂರ ಗ್ರಾಮಗಳಲ್ಲಿ 150ಲಕ್ಷ ರೂ.ಗಳಲ್ಲಿ ಗ್ರಾಪಂ ಕಚೇರಿ ನಿರ್ಮಿಸಲು ಅನುದಾನ ಮಂಜೂರುಗೊಳಿಸಿ ಕಟ್ಟಿಸಿದ್ದೇನೆ. ಆದರೆ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನಾನು ಕಟ್ಟಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸೇಡಂ ಕ್ಷೇತ್ರದಲ್ಲಿ ನಾನು ಸಚಿವನಾಗಿದ್ದಾಗ ಮಂಜೂರುಗೊಂಡಿರುವ ಅಭಿವೃದ್ಧಿ ಕಾಮಗಾರಿಗಳೇ ಇನ್ನು ನಡೆಯುತ್ತಿವೆ. ಬಿಜೆಪಿ ಶಾಸಕರ ಸಾಧನೆ ಶೂನ್ಯವಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಇಎಸ್‌ಐ, ಮೆಡಿಕಲ್‌ ಕಾಲೇಜು, ಮತ್ತು ಟ್ರಾಮಾ ಸೆಂಟರ್‌ ಆಗದೇ ಇದ್ದರೆ ಅನೇಕ ಜೀವಗಳು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಸಂಸದ ಡಾ| ಉಮೇಶ ಜಾಧವ್‌ ಕೋವಿಡ್‌ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸೇಡಂ ಶಾಸಕರು ಕೆನರಾ ಬ್ಯಾಂಕ್‌ನಲ್ಲಿ ಮಾಡಿದ ಅವ್ಯವಹಾರದ ಬಗ್ಗೆ ಇನ್ನು ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಬೇಕಾಗಿದೆ.

Advertisement

ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ನೀಡುತ್ತಿರುವ ರೈತರಿಗೆ ನೀಡುತ್ತಿರುವ ಸಾಲದಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಬ್ಯಾಂಕ್‌ನ್ನು ಸಂಪೂರ್ಣವಾಗಿ ಮುಳುಗಿಸುತ್ತಾರೆ ಎಂದು ವ್ಯಂಗ್ಯವಾಡಿದರು. ರುದ್ರಶೆಟ್ಟಿ ಪಡಶೆಟ್ಟಿ, ಬಸವರಾಜ ಬಿರಾದಾರ, ತಾಹೇರ ಪಟೇಲ, ಸುಭಾಶ ನಿಷ್ಟಿ, ಬಸವರಾಜ ಸಜ್ಜನಶೆಟ್ಟಿ, ಮೇಘರಾಜ, ನಾಸೀರ ಪಟೇಲ, ರಜಾಕ ಪಟೇಲ, ಅಂಬರೀಶ ಗಾಂಜೆ, ಮಹಾರುದ್ರಪ್ಪ ದೇಸಾಯಿ, ಚಾಂದಪಾಷಾ ಮೊಮಿನ, ಗ್ರಾಪಂ ಅಧ್ಯಕ್ಷ ಸರಸ್ವತಿ ಗಿರಿ ಇನ್ನಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next