Advertisement

ಪಂಪನ ಊರಿಂದಲೇ 4 ಲಕ್ಷ ರೊಟ್ಟಿ ಬಂತು!

12:00 AM Feb 06, 2020 | Team Udayavani |

ಕಲಬುರಗಿ: ಪಂಪ ಅಂದ್ರೆ ಎಚ್ಚೆಸ್ವಿಗೆ ಕಾವ್ಯಪ್ರಾಣ. ಪಂಪಭಾರತ, ಆದಿಪುರಾಣವನ್ನು ಎಚ್ಚೆಸ್ವಿಯಷ್ಟು ಸೊಗಸಾಗಿ ವರ್ಣಿಸುವ ಮತ್ತೂಬ್ಬ ಕವಿ ಅಪರೂಪ. ಅದೇನು ಕಾಕತಾಳೀಯವೋ ಗೊತ್ತಿಲ್ಲ, ಎಚ್ಚೆಸ್ವಿ ಅಧ್ಯಕ್ಷತೆ ವಹಿಸಿದ ಸಮ್ಮೇಳನಕ್ಕೆ ಪಂಪನ ಹುಟ್ಟೂರಿನಿಂದಲೇ 4 ಲಕ್ಷ ರೊಟ್ಟಿ ಹರಿದು ಬಂದಿವೆ.

Advertisement

ಹೌದು, ಅಣ್ಣಿಗೇರಿ ಭಾಗದ ಮಹಿಳೆಯರಿಗೆ ಕಳೆದ 10 ದಿನಗಳಿಂದ ರೊಟ್ಟಿ ತಟ್ಟುವುದೇ ಕೆಲಸ. ಆ ತಟ್ಟುವಿಕೆ ಸದ್ದಿನಲ್ಲೇ ಅವರ ಕನ್ನಡದ ಸಂಗೀತ ಹೊಮ್ಮುತ್ತಿತ್ತು. ಸಮ್ಮೇಳನದ ಮೂರು ದಿನಕ್ಕೆ ಸುಮಾರು 8 ಲಕ್ಷ ರೊಟ್ಟಿ ಅಗತ್ಯವಿತ್ತು. ಅದರಲ್ಲಿ ಅರ್ಧದಷ್ಟು ರೊಟ್ಟಿಗಳನ್ನು ಪಂಪನ ಹುಟ್ಟೂರಿನಿಂದ ಬಂದರೆ, ಬಾಗಲಕೋಟೆ ಜಿಲ್ಲೆಯಿಂದ 3 ಲಕ್ಷ, ಕಲಬುರಗಿ ಜಿಲ್ಲೆಯಿಂದ 1 ಲಕ್ಷ ರೊಟ್ಟಿ ಮಾಡಿಸಲಾಗಿದೆ.

ಅಣ್ಣಿಗೇರಿಯ ಸುಮಾರು 600ಕ್ಕೂ ಅಧಿಕ ಮಂದಿ ರೊಟ್ಟಿ ತಯಾರಿಕೆಯಲ್ಲಿ ಪಾಲ್ಗೊಂಡಿದ್ದರು. ಲಾರಿಗಳ ಮೂಲಕ ರೊಟ್ಟಿಗಳನ್ನು ತರಲಾಗಿದ್ದು, ಮೊದಲ ದಿನವೇ 2 ಲಕ್ಷ ರೊಟ್ಟಿಗಳು ಕನ್ನಡಪ್ರೇಮಿಗಳ ಹಸಿವನ್ನು ನೀಗಿಸಿವೆ.

* ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next