Advertisement

ಜಮ್ಮು-ಕಾಶ್ಮೀರ: ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಸಂಪರ್ಕ-ನಾಲ್ವರ ಬಂಧನ

08:37 AM May 14, 2020 | Nagendra Trasi |

ಜಮ್ಮು: ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ನಾಲ್ವರು ಉಗ್ರರನ್ನು ಪುಲ್ವಾಮಾದ ಆವಂತಿಪೋರಾದಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.

Advertisement

ಜಮ್ಮು-ಕಾಶ್ಮೀರದ ಖ್ರೇವ್ಯೂ ಮತ್ತು ತ್ರಾಲ್ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಜೈಶ್ ಉಗ್ರರಿಗೆ ಆಶ್ರಯ ಸೇರಿದಂತೆ ಇತರ ಬೆಂಬಲ ನೀಡುವ ಕೆಲಸದಲ್ಲಿ ನಾಲ್ವರು ಶಾಮೀಲಾಗಿರುವುದಾಗಿ ಪೊಲೀಸ್ ವಕ್ತಾರರು ವಿವರಿಸಿದ್ದಾರೆ.

ಉಗ್ರರ ನಿಕಟವರ್ತಿಗಳನ್ನು ಶಾಬೀರ್ ಅಹ್ಮದ್, ಶೀರಾಜ್ ಅಹ್ಮದ್ ದಾರ್, ಶಾಫಾತ್ ಅಹ್ಮದ್ ಮೀರ್ ಮತ್ತು ಇಶ್ಪಾಕ್ ಅಹ್ಮದ್ ಶಾ ಎಂದು ಗುರುತಿಸಲಾಗಿದ್ದು, ಎಲ್ಲರನ್ನೂ ಆವಂತಿಪೋರಾ ಮತ್ತು ಪುಲ್ವಾಮಾದ ನಿವಾಸಿಗಳು ಎಂದು ಪತ್ತೆ ಹಚ್ಚಲಾಗಿದೆ. ಬಾಥೆನ್ ಪ್ರದೇಶದಲ್ಲಿ ಸ್ಫೋಟಕ ವಸ್ತು ಹಾಗೂ ಮದ್ದುಗುಂಡು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next