Advertisement
ಕನಸಾಗಿಯೇ ಉಳಿದ ಬಾಗಿ ನ: ಸೆಪ್ಟೆಂಬ ರ್, ಅಕ್ಟೋಬರ್ ತಿಂಗಳ ನೀರನ್ನು ಈ ಬಾರಿ ತಮಿಳುನಾಡಿಗೆ ನೀಡಿದ್ದರಿಂದ ಮುಂಗಾರು ಮಳೆ ಇದ್ದರೂ ಸಂಪೂರ್ಣ ಜಲಾಶಯ ಗರಿಷ್ಠ ಮಟ್ಟ ಭರ್ತಿಆಗಲೇ ಇಲ್ಲ . ಮುಖ್ಯಮಂತ್ರಿಗಳಿಂದ ಈ ಬಾರಿ ಗೌರಿ ಗಣೇಶನ ಹಬ್ಬಕ್ಕಿಂತಲೂ ಮುಂಚಿತವಾಗಿ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಪೂಜೆ ಆಗಬೇಕಿತ್ತು. ಆದರೂ ಈ ವರ್ಷದಲ್ಲಿ ಇಲ್ಲಿವರೆಗೆ ಮುಖ್ಯಂತ್ರಿಗಳಿಂದ ಬಾಗಿನ ಕನಸಾಗಿಯೇ ಉಳಿದಿದೆ.
Related Articles
Advertisement
6,720 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ
ಇಲ್ಲಿವರೆಗೆ ಜಲಾಶಯದಲ್ಲಿ 43.106 ಟಿಎಂಸಿ ನೀರು ಸಂಗ್ರಹ
ಇದನ್ನೂ ಓದಿ:- ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
9 ಸಾವಿರ ಕ್ಯುಸೆಕ್ ಹೆಚ್ಚು ನೀರು: ಇದೀಗ ಮತ್ತೇ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿ ನೀರಿನ ಮಟ್ಟ ಏರಿಕೆ ಕಂಡು ಬಂದಿದೆ. ಗರಿಷ್ಠ ಮಟ್ಟ ತಲುಪಲು 124.80 ಅಡಿಗಳಾಗಿದ್ದು, ಇಂದಿನ ಮಟ್ಟ 120.08 ಅಡಿಗಳು ತುಂಬಿದೆ. ಜಲಾಶಯ ಒಟ್ಟು 49 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಇದು ವರೆಗೆ ಕೊಡಗಿನಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಜಲಾಶಯಕ್ಕೆ ಬುಧವಾರ ಬೆಳಗ್ಗೆ 9 ಸಾವಿರ ಕ್ಯುಸೆಕ್ ಹೆಚ್ಚು ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 05 ಸಾವಿರ ಕ್ಯುಸೆಕ್ ನೀರನ್ನು ಕುಡಿಯಲು ಕಾವೇರಿ ನದಿಗೆ ಹಾಗೂ ಬೆಳೆ ಬೆಳೆಯಲು ನಾಲೆಗಳಿಗೆ ಮೂಲಕ ಹರಿಸಲಾಗುತ್ತಿದೆ.
ಬುಧವಾರ ಸಂಜೆ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 8 ಸಾವಿರ ಕ್ಯುಸೆಕ್‌ಗೆ ಇಳಿಕೆ ಕಂಡು ಬಂದಿದೆ. ಪ್ರಸ್ತುತ ಜಲಾಶಯದಲ್ಲಿ 120.05 ಅಡಿ ನೀರಿನ ಮಟ್ಟ , 8097 ಸಾವಿರ ಕ್ಯುಸೆಕ್ ಜಲಾಶಯಕ್ಕೆ ಒಳಹರಿವಾಗಿದ್ದು ಜಲಾಶಯದಿಂದ 6,720 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇಲ್ಲಿವರೆಗೆ ಜಲಾಶಯದಲ್ಲಿ 43.106 ಟಿಎಂಸಿ ನೀರು ಸಂಗ್ರಹವಾಗಿದೆ.