Advertisement
ಬೆಳ್ತಂಗಡಿ ತಾಲೂಕಿನ ಹಲವು ಕಡೆ, ಕುಕ್ಕೆ ಸುಬ್ರಹ್ಮಣ್ಯ ಸಹಿತ ಹಲವು ಕಡೆ ಗಳಲ್ಲಿ ಬುಧವಾರ ಉತ್ತಮ ಮಳೆ ಯಾಗಿದೆ. ಮಂಗಳೂರು ಸಹಿತ ಹಲವು ಕಡೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ 33.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ 0.5 ಡಿ.ಸೆ. ಕಡಿಮೆ, 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಕಡಿಮೆ ದಾಖಲಾಗಿತ್ತು.
ಉಡುಪಿ ಜಿಲ್ಲೆಯಲ್ಲಿ ಮಂಗಳ ವಾರ ಸಂಜೆ, ತಡರಾತ್ರಿ ಮಳೆ ಯಿಂ ದಾಗಿ ಹಲವೆಡೆ ಹಾನಿ ಸಂಭವಿಸಿದೆ. ಬ್ರಹ್ಮಾವರ ಹೆಗ್ಗುಂಜೆಯ ಗುಲಾಬಿ ಶೆಟ್ಟಿ, ಸುನಿಲ್ ಡಿ’ಸೋಜಾ, ಕುಂದಾಪುರದ ಹೊಸಂಗಡಿ ಪ್ರೇಮಾ ಆಚಾರಿ, ಮೊಳಹಳ್ಳಿಯ ಕಾಡ್ತಿ, ನಾಗು ಶೆಟ್ಟಿ, ರಾಜು, ಬೆಳ್ಳಿ, ಸಿದ್ಧಾಪುರದ ಶಾರದಾ ಭಟ್, ಪ್ರಭಾಕರ್ ಭಟ್, ರಾಘವೇಂದ್ರ ಭಟ್, ಹೊಸಂಗಡಿ ಬಾಬಿ, ಉಳ್ಳೂರು ಶಂಕರ ಮಡಿವಾಳ ಅವರ ಮನೆಗೆ ಗಾಳಿ ಮಳೆಯಿಂದ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ 120 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 7 ವಿದ್ಯುತ್ ಪರಿವರ್ತಕಗಳಿಗೆ ಮತ್ತು 1.32 ಕಿ.ಮೀ. ತಂತಿಗೆ ಹಾನಿ ಸಂಭವಿಸಿ ಮೆಸ್ಕಾಂಗೆ 22 ಲಕ್ಷ ರೂ. ನಷ್ಟವಾಗಿದೆ.