Advertisement
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳನ್ನು ಶಾಸಕರಪ್ರದೇಶಾಭಿವೃದ್ಧಿ ಯೋಜನೆಯಡಿದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಇದರಿಂದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರೂ ಹೊರತಾಗಿಲ್ಲ. ಮೊದಲಿಂದಲೂ ತಮ್ಮ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹಲವಾರು ಯೋಜನೆಗಳನ್ನು ರೂಪಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವ ಅಭಯ ಪಾಟೀಲ ತಮ್ಮ ಕ್ಷೇತ್ರದಲ್ಲಿ ಸರಕಾರಿ ಪ್ರೌಢಶಾಲೆ ಹಾಗೂ ಕಾಲೇಜ್‌ಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ.
Related Articles
Advertisement
ಯಳ್ಳೂರು ಮರಾಠಿ ಶಾಲೆ- 25 ಲಕ್ಷ ರೂ. : ಯಳ್ಳೂರು ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಗೆ 25 ಲಕ್ಷ ರೂ ವೆಚ್ಚದ ಯೋಜನೆ ಸಿದ್ದಪಡಿಸಿರುವ ಶಾಸಕರು ಈ ಹಣದಲ್ಲಿ ಶಾಲೆಗೆ ಡೆಸ್ಕ, ಕ್ಲಾಸ್ ಮಾನಿಟರ್ ಹಾಗೂ ಗ್ರೀನ್ ಬೋರ್ಡ ಒದಗಿಸಲು ಉದ್ದೇಶಿಸಿದ್ದಾರೆ.
ವಡಗಾವಿ ಶಾಲೆ ನಂ.14-66 ಲಕ್ಷ ರೂ. ಕೊಠಡಿ ಜಿಲ್ಲೆಯ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಇದೂ ಸಹ ಒಂದು. ಶಾಲೆಗೆ ದಶಕಗಳ ಇತಿಹಾಸವಿದೆ. ಎಲ್ ಕೆ ಜಿ ಯಿಂದ ಹಿಡಿದು ಎಂಟನೇ ತರಗತಿಯವರೆಗೆಇಲ್ಲಿ ಕಲಿಸಲಾಗುತ್ತಿದೆ. ಇದಲ್ಲದೆ ಆಂಗ್ಲಮಾಧ್ಯಮದಲ್ಲಿ ಒಂದರಿಂದ ಎರಡು ತರಗತಿಗಳಿವೆ. ಒಟ್ಟು 750 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯನ್ನು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ದತ್ತು ಪಡೆದಿರುವ ಶಾಸಕ ಅಭಯ ಪಾಟೀಲ 66 ಲಕ್ಷ ರೂ ವೆಚ್ಚದಲ್ಲಿ ಆರು ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಶಾಲಾ ಆವರಣದಲ್ಲಿ ಒಟ್ಟು 25 ಕೊಠಡಿಗಳಿದ್ದು ಅದರಲ್ಲಿ ಆರು ಕೊಠಡಿಗಳನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ಈಗಾಗಲೇ 60 ಲಕ್ಷ ರೂ ವೆಚ್ಚದಲ್ಲಿ ಸ್ಮಾರ್ಟ್‌ಕ್ಲಾಸ್ ರೂಮ್‌ಗಳನ್ನು ನಿರ್ಮಾಣ ಮಾಡಲಾಗಿದೆ
ವಡಗಾವಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಬಹಳ. ಹೀಗಾಗಿ ಇನ್ನೂ ಬಹಳ ಕೊಠಡಿಗಳು ಬೇಕು. ಇದಕ್ಕಾಗಿ ಶಾಸಕರಿಗೆ ಮನವಿ ಮಾಡಿದ್ದೇವೆ. ಈಗ ಆರು ಕೊಠಡಿಗಳು ಮಂಜೂರಾಗಿವೆ. ಇದಲ್ಲದೆ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ ಅಗತ್ಯವಾಗಿ ಬೇಕಾಗಿದೆ. ಇದನ್ನು ಶಾಸಕರ ಗಮನಕ್ಕೆ ತಂದಿದ್ದೇವೆ. –ವಿ ಟಿ ಅಪ್ಪಾಜಿಗೋಳ, ಮುಖ್ಯೋಪಾಧ್ಯಾಯರು.
ಸರಕಾರಿ ಶಾಲೆಗಳು ಯಾವುದರಲ್ಲೂ ಕಮ್ಮಿ ಇರಬಾರದು ಎಂಬುದು ನಮ್ಮ ಗುರಿ ಹಾಗು ಆಶಯ. ಶಾಲೆಗಳು ಸುಸಜ್ಜಿತವಾಗಿದ್ದರೆ ಮಕ್ಕಳು ಬರುತ್ತಾರೆ. ಉತ್ತಮ ವಿದ್ಯಾಭ್ಯಾಸ ಮತ್ತ ಫಲಿತಾಂಶನಿರೀಕ್ಷೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಖಾಸಗಿಶಾಲೆಗಳಿಗೆ ಏನೂ ಕಡಿಮೆ ಇಲ್ಲ ಎನ್ನುವಂತೆ ಕ್ಷೇತ್ರದ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವದು.-ಅಭಯ ಪಾಟೀಲ, ಶಾಸಕರು, ಬೆಳಗಾವ ದಕ್ಷಿಣ.
-ಕೇಶವ ಆದಿ