Advertisement

ಚಿಂತಾಮಣಿ ಕ್ಷೇತ್ರದಲ್ಲಿ 4 ಚೆಕ್‌ಪೋಸ್ಟ್‌ ಸ್ಥಾಪನೆ

07:43 AM Mar 12, 2019 | Team Udayavani |

ಚಿಂತಾಮಣಿ: ಲೋಕಸಭಾ ಚುನಾವಣೆಗೆ ಭಾನುವಾರದಿಂದ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಕ್ಷೇತ್ರವಾಗಿರುವುದರಿಂದ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ 4 ಕಡೆ ಚೆಕ್‌ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ ಎಂದು ತಹಶೀಲ್ದಾರ್‌ ವಿಶ್ವನಾಥ ತಿಳಿಸಿದರು. 

Advertisement

ನಗರದ ತಾಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿಗೆ ಹೊಂದಿಕೊಂಡಿರುವ ಗಡಿಭಾಗವಾದ ಅಂಕಾಲಮೊಡಗು, ಕಂಬಾಲಪಲ್ಲಿ ಹಾಗೂ ಮಾಡಿಕೆರೆ ಕ್ರಾಸ್‌, ಕೈವಾರ ಕ್ರಾಸ್‌ಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದ್ದು, ಕೈವಾರ ಚೆಕ್‌ಪೋಸ್ಟ್‌ನಲ್ಲಿ ಸಂಚಾರ ಹೆಚ್ಚಿರುವುದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು. 

ಅನುಮತಿ ಕಡ್ಡಾಯ: ಖಾಸಗಿ ಸಭೆ ಸಮಾರಂಭಗಳನ್ನು ನಡೆಸುವವರು ಸಹಾಯಕ ಚುನಾವಣಾಧಿಕಾರಿಯ ಅನುಮತಿ ಕಡ್ಡಾಯವಾಗಿ ಪಡೆಯಬೇಕೆಂದು ಹೇಳಿದರು. 

ಆದೇಶ ಬಂದಿಲ್ಲ: ಆಯೋಗದ ಸೂಚನೆಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ವಿಚಾರಗಳು ಪ್ರಸಾರ ಮಾಡಬಾರದು ಎಂದು ಸೂಚಿಸಿದ್ದು, ಇದರ ಹಿನ್ನೆಲೆಯಲ್ಲಿ ಯುಟೂಬ್‌ ವಾಹಿನಿಗಳಲ್ಲೂ ಸಹ ರಾಜಕೀಯ ಸುದ್ದಿಗಳನ್ನು ರದ್ದು ಮಾಡಲು ಜಿಲ್ಲಾಧಿಕಾರಿಗಳಿಂದ ನಮಗೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next