Advertisement
ಈ ಹಂತದಲ್ಲಿ ಮೊತ್ತವನ್ನು ಏರಿಸಲು ನಾಯಕ ಸಫ್ರಾìಜ್ ಅಹ್ಮದ್ ಹರಸಾಹಸ ಮಾಡುತ್ತಿದ್ದರು. ಆ ವೇಳೆ ಸಫ್ರಾìಜ್ 2 ರನ್‌ಗಳಿಗಾಗಿ ಓಡುತ್ತಿದ್ದರು. 1 ರನ್ ಓಟ ಮುಗಿಸಿ ಇನ್ನೇನು 2ನೇ ರನ್ ಓಟವನ್ನೂ ಮುಗಿಸಬೇಕು ಅಷ್ಟರಲ್ಲಿ ಯಾಸಿರ್ ಶಾ ವಿಚಿತ್ರ ರೀತಿಯಲ್ಲಿ ರನೌಟಾದರು! ಯಾಸಿರ್ ಓಡುತ್ತಿದ್ದಾಗ ಅವರ ಶೂ ಕಳಚಿಕೊಂಡು ಹೋಗಿದ್ದು ಇದಕ್ಕೆ ಕಾರಣ. ಇದರಿಂದ ಓಟದ ಗತಿ ನಿಧಾನಗೊಂಡು ಅವರು ರನೌಟಾದರು. ನಾಯಕ ಸಫ್ರಾìಜ್ ಹತಾಶೆಯಿಂದ ಪರಿಸ್ಥಿತಿಯನ್ನು ನೋಡುತ್ತಿದ್ದರು! 346 ರನ್‌ಗೆ ಯಾಸಿರ್ ರೂಪದಲ್ಲಿ 8ನೇ ವಿಕೆಟ್ ಕಳೆದುಕೊಂಡ ಪಾಕ್, ಇನ್ನೆರಡು ರನ್ ಜೋಡಿಸುವಷ್ಟರಲ್ಲಿ ಆಲೌಟಾಯಿತು.
ಪಾಕಿಸ್ತಾನದ ಬಲಗೈ ಲೆಗ್‌ಸ್ಪಿನ್ನರ್ ಯಾಸಿರ್ ಶಾ ವಿಶ್ವದಾಖಲೆಯೊಂದನ್ನು ಸ್ಥಾಪಿಸಿದ್ದಾರೆ. 33 ವರ್ಷದ ಯಾಸಿರ್ ತಾವಾಡಿದ 33ನೇ ಟೆಸ್ಟ್‌ನಲ್ಲಿ 200 ವಿಕೆಟ್ ಗಳಿಸಿದ್ದಾರೆ. ಇದು ಅತಿವೇಗವಾಗಿ 200 ವಿಕೆಟ್ ಗಳಿಸಿದ ವಿಶ್ವದಾಖಲೆ. ಯಾಸಿರ್ ತಮ್ಮ ಅದ್ಭುತ ಸಾಧನೆಯೊಂದಿಗೆ 82 ವರ್ಷದ ಹಿಂದಿನ ದಾಖಲೆಯನ್ನು ಪುಡಿ ಮಾಡಿದರು. 1936ರಲ್ಲಿ ಆಸ್ಟ್ರೇಲಿಯದ ಲೆಗ್‌ಸ್ಪಿನ್ನರ್ ಕ್ಲಾರಿ ಗ್ರಿಮೆಟ್ 36 ಟೆಸ್ಟ್‌ಗಳಲ್ಲಿ 200 ವಿಕೆಟ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಟೆಸ್ಟ್‌ನಲ್ಲಿ ಇಷ್ಟು ಅದ್ಭುತ ಬೌಲಿಂಗ್ ದಾಖಲೆ ಹೊಂದಿದ್ದರೂ, ಏಕದಿನ ಮತ್ತು ಟಿ20ಯಲ್ಲಿ ಯಾಸಿರ್ ಪಾತ್ರ ತುಂಬಾ ಕಡಿಮೆ. ಇದುವರೆಗೆ ಅವರು ಕೇವಲ 19 ಏಕದಿನ, 2 ಟಿ20 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.