ರಾಜ್ ಕೋಟ್ : ಇಲ್ಲಿ ನಡೆದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ 434 ರನ್ ಗಳ ಅಮೋಘ ಜಯ ಸಾಧಿಸಿದೆ. ಭರ್ಜರಿ ಜಯದೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ 557 ರನ್ ಗಳ ಭಾರಿ ಗುರಿ ಬೆನ್ನಟ್ಟಿದ ಆಂಗ್ಲರು ಟೀಮ್ ಇಂಡಿಯಾದ ಬಿಗಿ ಬೌಲಿಂಗ್ ದಾಳಿಗೆ ನಲುಗಿ 122 ರನ್ ಗಳಿಗೆ ಆಲೌಟಾದರು. ಜಡೇಜ 5 ವಿಕೆಟ್ ಕಬಳಿಸಿದರು.
ಎರಡನೇ ಇನ್ನಿಂಗ್ಸ್ ನಲ್ಲಿ ಅಮೋಘ ಆಟವಾಡಿದ ಯಶಸ್ವಿ ಜೈಸ್ವಾಲ್ 214 ರನ್ ಗಳಿಸಿ ಔಟಾಗದೆ ಉಳಿದರು.ಮೊದಲ ಪಂದ್ಯದಲ್ಲೇ ಇನ್ನೊಂದು ಅಮೋಘ ಇನ್ನಿಂಗ್ಸ್ ಆಟವಾಡಿದ ಸರ್ಫರಾಜ್ ಖಾನ್ 68 ರನ್ ಗಳಿಸಿ ಔಟಾಗದೆ ಉಳಿದರು. ಮೊದಲ ಇನ್ನಿಂಗ್ಸ್ ನಲ್ಲಿ 62 ರನ್ ಗಳಿಸಿದ್ದ ವೇಳೆ ರನ್ ಔಟ್ ಗೆ ಬಲಿಯಾಗಿದ್ದರು.
4 ನೇ ಟೆಸ್ಟ್ ಟೆಸ್ಟ್ ಫೆಬ್ರವರಿ 23 ರಿಂದ JSCA ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್ ರಾಂಚಿಯಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್ : ಭಾರತ ಮೊದಲ ಇನ್ನಿಂಗ್ಸ್
445, 2ನೇ ಇನಿಂಗ್ಸ್
430-4 ಡಿಕ್ಲೇರ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
319, 2ನೇ ಇನಿಂಗ್ಸ್
122