Advertisement
ಈ ಆತಂಕಕಾರಿ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರ ಹಾಕಿದೆ. ಒಂದೇ ದಿನ ಇಷ್ಟೊಂದು ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲು.ಕೆಲವು ರಾಜ್ಯಗಳು ಸಮಯಕ್ಕೆ ಸರಿಯಾಗಿ ಕೋವಿಡ್-19 ಪ್ರಕರಣಗಳ ಮಾಹಿತಿ ನೀಡುತ್ತಿಲ್ಲ. ನಿಗದಿತ ಸಮಯಕ್ಕೆ ಅಂಕಿಅಂಶಗಳನ್ನು ನೀಡಿದರಷ್ಟೇ ನಿರ್ವಹಣೆ ಸುಲಭವಾಗುತ್ತದೆ. ಈಗ ಕೆಲವು ರಾಜ್ಯಗಳು ಏಕಾಏಕಿ ಮಾಹಿತಿ ಕೊಟ್ಟ ಕಾರಣ ಒಂದೇ ದಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಮಟ್ಟದಲ್ಲಿ ಸೋಂಕುಪೀಡಿತರು ಗುಣಮುಖ ರಾಗುವ ಪ್ರಮಾಣ ಶೇ.27.41ಕ್ಕೆ ಏರಿಕೆಯಾಗಿದೆ ಎಂದೂ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್-19 ಪೀಡಿತರ ಸಾವಿನ ಸರಣಿ ಮುಂದು ವರಿದಿದ್ದು, ಮಂಗಳವಾರ ದಾವಣಗೆರೆ ಮತ್ತು ವಿಜಯಪುರಗಳಲ್ಲಿ ತಲಾ ಒಬ್ಬ ಸೋಂಕುಪೀಡಿತ ಮಹಿಳೆ ಸಾವಿಗೀಡಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 29ಕ್ಕೆ ಏರಿದೆ. ಕಳೆದ ಐದು ದಿನಗಳಲ್ಲಿ ದಾವಣ ಗೆರೆಯಲ್ಲೇ ಮೂವರು ಸಾವನ್ನಪ್ಪಿದಂತಾಗಿದೆ. ಈ ಮಧ್ಯೆ ರಾಜ್ಯದ ವಿವಿಧೆಡೆ 22 ಮಂದಿಗೆ ಸೋಂಕು ತಗಲಿದ್ದು, ಒಟ್ಟಾರೆ ಸೋಂಕು ತಗಲಿದವರ ಸಂಖ್ಯೆ 673ಕ್ಕೆ ತಲುಪಿದೆ. ದಾವಣಗೆರೆ ಯಲ್ಲೇ ಮಂಗಳವಾರ ಮತ್ತೆ 12 ಮಂದಿಗೆ ಕೋವಿಡ್-19 ದೃಢವಾಗಿದೆ. ದ.ಕ.: ಮತ್ತೂಬ್ಬರಿಗೆ ಸೋಂಕು
ಮಂಗಳೂರು: ನಗರದ ಬೋಳೂರಿನ ಮತ್ತೂಬ್ಬರಲ್ಲಿ ಕೋವಿಡ್-19 ದೃಢ ಪಟ್ಟಿದೆ. ಇದು ಜಿಲ್ಲೆಯಲ್ಲಿ 25ನೇ ಕೋವಿಡ್-19 ಪ್ರಕರಣ. ಈ ಹಿಂದೆ ಬೊಳೂರಿನ ದಂಪತಿಯಲ್ಲಿ ಕೋವಿಡ್-19 ದೃಢವಾಗಿದ್ದು, ಮಂಗಳವಾರ ಪಾಸಿಟಿವ್ ಬಂದಾತ ಈ ದಂಪತಿಯ ಅಳಿಯ. ಈ ಮನೆಯ ಇನ್ನೂ ಇಬ್ಬರ ಪರೀಕ್ಷಾ ವರದಿಗಾಗಿ ಕಾಯುಲಾಗುತ್ತಿದೆ.
Related Articles
Advertisement