Advertisement

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

04:28 PM Mar 29, 2024 | Team Udayavani |

ಡಮಾಸ್ಕಸ್: ಶುಕ್ರವಾರ ಮುಂಜಾನೆ ಉತ್ತರ ಸಿರಿಯಾದ ಅಲೆಪ್ಪೊ ನಗರದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಲೆಬನಾನಿನ ಸಶಸ್ತ್ರ ಗುಂಪಿನ ಐವರು ಸದಸ್ಯರು ಸೇರಿದಂತೆ 38 ಮಂದಿ ಹತರಾಗಿರುವುದಾಗಿ ಮೂಲಗಳು ತಿಳಿಸಿವೆ.

Advertisement

ಸಿರಿಯಾದಲ್ಲಿ ಇರಾನ್‌ನ ಮಿತ್ರರಾಷ್ಟ್ರಗಳ ವಿರುದ್ಧ ಇಸ್ರೇಲ್ ನಡೆಸಿದ ದಾಳಿಯ ಪರಿಣಾಮ ಹಲವು ಮಂದಿ ಹತರಾಗಿದ್ದಾರೆ ಎಂದು ವರದಿಯಾಗಿವೆ.

ಅಕ್ಟೋಬರ್ 7 ರಂದು ಇರಾನ್ ಬೆಂಬಲಿತ ಪ್ಯಾಲೇಸ್ಟಿನಿಯನ್ ಬಣ ಹಮಾಸ್ ಇಸ್ರೇಲ್‌ಗೆ ನುಗ್ಗಿದ ನಂತರ ಆರಂಭವಾದ ದಾಳಿಯಾ ನಂತರ ಸೇಡು ತೀರಿಸಿಕೊಳ್ಳಲು ಇಸ್ರೇಲ್ ಸಿರಿಯಾದಲ್ಲಿ ಹಿಜ್ಬುಲ್ಲಾ ಮತ್ತು ಇರಾನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಎರಡರ ಮೇಲೆಯೂ ತನ್ನ ವೈಮಾನಿಕ ದಾಳಿಯನ್ನು ಹೆಚ್ಚಿಸಿದೆ.

ಇಸ್ರೇಲ್ ಈ ಪ್ರದೇಶದಲ್ಲಿ ಇರಾನ್‌ನ ಮಿತ್ರರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳ ಪೂರೈಸಲು ಅಡ್ಡಿಪಡಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗಿದೆ, ಆದರೆ ಅಕ್ಟೋಬರ್ 7 ರಿಂದ ದಾಳಿಗಳು ತುಂಬಾ ಭಯಾನಕವಾಗಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next