ರಿಷಿಕೇಶ್(ಉತ್ತರಾಖಂಡ್): ಯೋಗ ನಿರತ 37 ವರ್ಷದ ವಿದೇಶಿ ಯುವತಿ ಮೇಲೆ ಸ್ಥಳೀಯ ವ್ಯಕ್ತಿ ಅತ್ಯಾಚಾರ ಎಸಗಿರುವ ಘಟನೆ ರಿಷಿಕೇಶದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವತಿ ನೀಡಿರುವ ದೂರಿನ ಪ್ರಕಾರ, ಯೋಗ ಬಗ್ಗೆ ತನಗೆ ತುಂಬಾ ಒಲವು ಇದೆ, ತಾನು ಕಲಿಯಬೇಕೆಂಬ ನೆಪದಲ್ಲಿ ತನ್ನ ಸ್ನೇಹ ಬೆಳೆಸಲು ಈ ವ್ಯಕ್ತಿ ಬಯಸಿದ್ದ. ಹೀಗೆ ಅಕ್ಟೋಬರ್ 5ರಂದು ನಾನು ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಬಾಲ್ಕನಿಯಿಂದ ನನ್ನ ಕೋಣೆಯೊಳಗೆ ಬಂದು ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾಳೆ.
ಈ ವ್ಯಕ್ತಿ ಹಲವಾರು ಬಾರಿ ಯುವತಿಯನ್ನು ಮನೆಗೆ ಬರುವಂತೆ ಕರೆದಿದ್ದ. ತನಗೆ ಯೋಗದ ಬಗ್ಗೆ ತಿಳಿಸಿಕೊಡಬೇಕು ಎಂದು ದುಂಬಾಲು ಬಿದ್ದಿರುವುದಾಗಿ ದೂರಿನಲ್ಲಿ ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿ ಆರ್ ಕೆ ಸಕ್ಲಾನಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಡ್ಡಿದರ ಯಥಾಸ್ಥಿತಿ; 2020-21ನೇ ಸಾಲಿನಲ್ಲಿ ಜಿಡಿಪಿ ಶೇ.9.5ರಷ್ಟಾಗಲಿದೆ: RBI
ಅಮೆರಿಕದ ಯುವತಿಗೆ ಯೋಗ ಮತ್ತು ಮಾದಕ ವಸ್ತುವಿನ ಮೇಲೆ ಅಪಾರ ಪ್ರೀತಿ ಇದ್ದು, ಇದರಿಂದಾಗಿ ಆರೋಪಿ ಈಕೆಗೆ ನಿಕಟವಾಗಲು ಪ್ರಯತ್ನಿಸಿರುವುದಾಗಿ ವರದಿ ಹೇಳಿದೆ.