Advertisement

ಬಿಜೆಪಿಗೆ 3,623 ಕೋಟಿ ರೂ. ಆದಾಯ! ಚುನಾವಣಾ ಬಾಂಡ್‌ ಮೂಲಕವೇ 2,555 ಕೋಟಿ ರೂ. ಗಳಿಕೆ

07:29 PM Aug 10, 2021 | Team Udayavani |

ನವದೆಹಲಿ: ಆಡಳಿತಾರೂಢ ಬಿಜೆಪಿಯು, 2019-20ರಲ್ಲಿ ತನಗೆ 3,623 ಕೋಟಿ ರೂ.ಗಳಿಗೂ ಮಿಗಿಲಾದ ಆದಾಯ ಬಂದಿರುವುದಾಗಿ ಪ್ರಕಟಿಸಿದ್ದು, ಇದರಲ್ಲಿ 2,555 ಕೋಟಿ ರೂ. ಹಣ ಚುನಾವಣಾ ಬಾಂಡ್‌ಗಳ ಮೂಲಕ ಬಂದಿದೆ ಎಂದು ಹೇಳಿದೆ.

Advertisement

ಕೇಂದ್ರ ಚುನಾವಣಾ ಆಯೋಗಕ್ಕೆ (ಇಸಿ) ಸಲ್ಲಿಸಿರುವ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖೀಸಿರುವ ಬಿಜೆಪಿ, 2019-20ರಲ್ಲಿ ತನಗೆ 3623,28,06,093 ರೂ.ಗಳಷ್ಟು ಆದಾಯ ಬಂದಿದೆ. ಅದರಲ್ಲಿ, 2555,00,01,000 ರೂ.ಗಳಷ್ಟು ಹಣ ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹವಾಗಿರುವುದಾಗಿ ತಿಳಿಸಿದೆ.

“ಈ ಆದಾಯದಲ್ಲಿ, 1651,02,25,425 ರೂ.ಗಳಷ್ಟು ಖರ್ಚಾಗಿದ್ದು, 2019ರ ಚುನಾವಣೆಯಲ್ಲಿ ಪಕ್ಷದ ಪ್ರಚಾರಕ್ಕಾಗಿಯೇ 1,352 ಕೋಟಿ ರೂ. ವ್ಯಯ ಮಾಡಲಾಗಿದೆ. ಇನ್ನು, ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತಿಗಾಗಿ 400 ಕೋಟಿ ರೂ. ಖರ್ಚು ಮಾಡಲಾಗಿದೆ’ ಎಂದು ಬಿಜೆಪಿ ವಿವರಿಸಿದೆ.

ಇದನ್ನೂ ಓದಿ :ಜಪಾನ್ ಕಂಪನಿ ತೆಕ್ಕೆಗೆ ಉಡುಪಿಯ ‘ರೋಬೋಸಾಫ್ಟ್‌’ : 805 ಕೋಟಿ ರೂ.ಗೆ ಮಾರಾಟ

ಮತ್ತೂಂದೆಡೆ, 2019-20ರಲ್ಲಿ ಬಿಜೆಪಿಗೆ ದೇಣಿಗೆ ರೂಪದಲ್ಲಿರುವ ಚುನಾವಣಾ ಬಾಂಡ್‌ಗಳಲ್ಲಿ, ಶೇ. 76ರಷ್ಟು ಮಾರಾಟವಾಗಿದ್ದು, ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ನ ಚುನಾವಣಾ ಬಾಂಡ್‌ಗಳಲ್ಲಿ ಶೇ. 9ರಷ್ಟು ಮಾತ್ರ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next