Advertisement

350-400ರ ಗಡಿ ದಾಟುವುದೇ ಧಾರಣೆ? ನೇಪಾಲ ಗಡಿ ವಿವಾದ: ಅಡಿಕೆ ಆಮದು ಸ್ಥಗಿತ; ಬೇಡಿಕೆ ಏರಿಕೆ

02:11 AM Jul 04, 2020 | Sriram |

ಪುತ್ತೂರು: ನೇಪಾಲ ಗಡಿ ವಿವಾದದ ಪರಿಣಾಮ ಭವಿಷ್ಯದಲ್ಲಿ ಭಾರತಕ್ಕೆ ಅಡಿಕೆ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಉತ್ತರ ಭಾರತದಲ್ಲಿ ಅಡಿಕೆ ಕೊರತೆ ತೀವ್ರ ಗೊಳ್ಳುವ ಆತಂಕ ಸೃಷ್ಟಿಯಾಗಿದೆ. ಪರಿಣಾಮವಾಗಿ ಮಂಗಳೂರು ಚಾಲಿ ಅಡಿಕೆಗೆ ಬೇಡಿಕೆ ಹೆಚ್ಚಿ ಧಾರಣೆ ಮತ್ತಷ್ಟು ಏರುವ ಸಾಧ್ಯತೆ ಇದೆ.

Advertisement

ಈಗಾಗಲೇ ಇಳುವರಿ ಕೊರತೆ, ಆಮದಿಗೆ ಕಡಿವಾಣ ಹಾಕಿದ ಕಾರಣ ಹೊಸ, ಹಳೆ ಅಡಿಕೆ ಧಾರಣೆ 325ರಿಂದ 345 ರೂ. ತನಕ ಏರಿದೆ. ಪೂರೈಕೆಯಲ್ಲಿ ತಲ್ಲಣಗಳ ಪರಿಣಾಮ ಇನ್ನೆರಡು ತಿಂಗಳಲ್ಲಿ 350 ರೂ. ಗಡಿ ದಾಟಿ 400 ರೂ.ಗೆ ಏರಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ನೇಪಾಲದಿಂದ ಬಂದ್‌!
ಈ ಹಿಂದೆ ವಿದೇಶೀ ಅಡಿಕೆ ಶ್ರೀಲಂಕಾ ಮೂಲಕ ಭಾರತ ಪ್ರವೇ ಶಿಸುತ್ತಿತ್ತು. ಶ್ರೀಲಂಕಾವು ನೇರ ಆಮದು ಮತ್ತು ಮರು ರಪ್ತು ನಿಷೇಧಿಸಿದ ಪರಿ ಣಾಮ ಇದು ಸ್ಥಗಿತಗೊಂಡಿತು. ಆದರೂ ಭಾರತ-ನೇಪಾಲ ಮುಕ್ತ ವ್ಯಾಪಾರ ಒಪ್ಪಂದದನ್ವಯ ಕಳಪೆ ಅಡಿಕೆ ಭಾರತಕ್ಕೆ ಪೂರೈಕೆ ಆಗುತ್ತಿತ್ತು. ಸದ್ಯ ಗಡಿ ವಿವಾದದಿಂದ ಆಮದು ಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಮಂಗಳೂರು ಚಾಲಿ ಅಡಿಕೆಗೆ ಉತ್ತರ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಲಾಕ್‌ಡೌನ್‌, ಇಳುವರಿ ಕೊರತೆಯಿಂದ ಧಾರಣೆ ಹೆಚ್ಚಿಸಿದರೂ ನಿರೀಕ್ಷಿತ ಅಡಿಕೆ ಪೂರೈಕೆ ಆಗುತ್ತಿಲ್ಲ. ಹಾಗಾಗಿ ಕರ್ನಾಟಕ, ಕೇರಳದ ಅಡಿಕೆಯನ್ನು ಅವಲಂಬಿಸಬೇಕಿದೆ. ಇದು ಇನ್ನಷ್ಟು ಧಾರಣೆ ವೃದ್ಧಿಗೆ ಕಾರಣವೆನಿಸಲಿದೆ.

ಕೋವಿಡ್ ಕಾರಣ ಅಂತಾರಾಷ್ಟ್ರೀಯ ಗಡಿಭಾಗ ಸೀಲ್‌ಡೌನ್‌ ಆಗಿ ಅಡಿಕೆ ಸಹಿತ ಯಾವುದೇ ವಸ್ತುಗಳು ಆಮದು -ರಪ್ತು ಆಗುತ್ತಿಲ್ಲ. ಲಾಕ್‌ಡೌನ್‌ಗೆ ಮುನ್ನ ನೇಪಾಲದಿಂದ ಅಡಿಕೆ ಪೂರೈಕೆ ಆಗುತ್ತಿತ್ತು. ಗಡಿವಿವಾದ, ಇಳುವರಿ ಕೊರತೆಗಳಿಂದ ಧಾರಣೆ ಇನ್ನಷ್ಟು ಏರಲಿದೆ.
– ಎಸ್‌.ಆರ್‌. ಸತೀಶ್ಚಂದ್ರ, ಅಧ್ಯಕ್ಷರು, ಕ್ಯಾಂಪ್ಕೋ

Advertisement
Advertisement

Udayavani is now on Telegram. Click here to join our channel and stay updated with the latest news.

Next