Advertisement
ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆದ 25ನೇ ವರ್ಷದ ಕೋಟಿ -ಚೆನ್ನಯ ಜೋಡುಕರೆ ಕಂಬಳದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸ್ವರ್ಣೋದ್ಯಮಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಕಂಬಳ ಅವಿಭಜಿತ ಜಿಲ್ಲೆಯ ರೋಚಕ ಕ್ರೀಡೆ. ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಮುಂದೆಯೂ ಕಂಬಳ ನಿರ್ವಿಘ್ನವಾಗಿ ನಡೆಯಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯ ತೀರ್ಪುಗಾರ ಎಡ್ತೂರು ರಾಜೀವ್ ಶೆಟ್ಟಿ ಮಾತನಾಡಿ, ನನ್ನ ಗುರು ದಿವಾಕರ ರೈ ಅವರೂ ಸೇರಿಕೊಂಡು ಆರಂಭಿಸಿದ ಕಂಬಳವಾಗಿರುವುದರಿಂದ ಇಲ್ಲಿನ ಕಂಬಳದಲ್ಲಿ ಸ್ವಯಂ ಸೇವಕನಾಗಿ ಪಾಲ್ಗೊಳ್ಳುತ್ತಿದ್ದೆ ಎಂದರು. ಉಭಯ ಜಿಲ್ಲೆಗಳಲ್ಲಿ ನಡೆಯುವ ಎಲ್ಲ ಕಂಬಳಗಳಿಗಿಂತಲೂ ಪುತ್ತೂರಿನ ಕಂಬಳವೇ ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಹುಮಾನ ವಿತರಣೆ
ಕಂಬಳದ ತೀರ್ಪುಗಾರರು, ಮುಖ್ಯ ಸ್ವಯಂ ಸೇವಕರನ್ನು ಗೌರವಿಸಲಾಯಿತು. ಕಂಬಳ ಕೋಣಗಳ ವಿಜೇತ ಮಾಲಕರು ಹಾಗೂ ಓಡಿಸಿದವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
Related Articles
Advertisement
ಕೋಟಿ -ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ವಂದಿಸಿದರು. ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.
ಅಧ್ಯಕ್ಷತೆ ಮುಂದುವರೆಯಲಿಸಮಾರೋಪ ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿದ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, 10 ವರ್ಷಗಳಿಂದ ಕಂಬಳ ಸಮಿತಿಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇನ್ನು ಮುಂದೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಲು ಮುತ್ತಪ್ಪ ರೈ ಅವರಲ್ಲಿ ತಿಳಿಸಿರುವುದಾಗಿ ಹೇಳಿದರು. ಹಾಜರಿದ್ದ ಗಣ್ಯರೆಲ್ಲ, ಸಮಿತಿಯ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿಯವರೇ ಮುಂದುವರೆಯುವಂತೆ ಆಶಯ ವ್ಯಕ್ತಪಡಿಸಿದರು.