Advertisement
ಆರಾಧನೆ ನಿಮಿತ್ತ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ವಿವಿಧ ದೃವ್ಯಗಳಿಂದ ಮಹಾ ಪಂಚಾಮೃತಾಭಿಷೇಕ ನಡೆಸಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಅಭಿಷೇಕಗಳನ್ನು ನಡೆಸಿದರು. ಬೆಳಗಿನ ಜಾವ ದಿಂದಲೆ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಗುತ್ತಿದ್ದು, ಸಹಸ್ರಾರು ಭಕ್ತರ ಮಧ್ಯೆ ನವರತ್ನ ಖಚಿತ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.
Related Articles
Advertisement
ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ರಾಯರ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ರಾಯರ ಮೂಲ ವೃಂದಾವನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಈ ಬಾರಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಚನ್ನಾಗಿರುವ ಕಾರಣ ಭಕ್ತರ ಪುಣ್ಯಸ್ನಾನಕ್ಕೆ ಅನುಕೂಲವಾಗಿದೆ. ಸ್ನಾನಘಟ್ಟದಲ್ಲಿ ಮಠದಿಂದ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸೋಮವಾರ ಪೂರ್ವಾಧನೆ ನಡೆದಿದ್ದು ,ಬುಧವಾರ ಉತ್ತರಾರಾಧನೆ ಜರುಗಲಿದೆ.