ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ 33 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ.
10 ಮಂದಿ ಗುಣಮುಖರಾಗಿದ್ದಾರೆ. 473 ಪ್ರಕರಣಗಳು ಸಕ್ರಿಯವಾಗಿವೆ. ಓರ್ವರು ಮೃತಪಟ್ಟಿದ್ದಾರೆ.
ಚಾಮರಾಜನಗರ ತಾಲೂಕಿನಿಂದ 14, ಗುಂಡ್ಲುಪೇಟೆ ತಾಲೂಕಿನಿಂದ 7, ಯಳಂದೂರು ತಾಲೂಕಿನಿಂದ 6, ಕೊಳ್ಳೇಗಾಲ ತಾಲೂಕಿನಿಂದ 4, ಹನೂರು ತಾಲೂಕಿನಿಂದ 1, ಹೊರ ಜಿಲ್ಲೆಯ 1 ಪ್ರಕರಣ ಪತ್ತೆಯಾಗಿದೆ. ಒಟ್ಟು 723 ಮಾದರಿಗಳನ್ನು ಪರೀಕ್ಷಿಸಲಾಗಿತ್ತು.
ಇದುವರೆಗೆ ಜಿಲ್ಲೆಯಲ್ಲಿ 2187 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 1670 ಮಂದಿ ಗುಣಮುಖರಾಗಿದ್ದಾರೆ. 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 213 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ನಗರದ ರಾಮಸಮುದ್ರ ಬಡಾವಣೆಯ 58 ವರ್ಷದ ಮಹಿಳೆ ಆ. 19ರಂದು ಕೋವಿಡ್ ಆಸ್ಪತ್ರೆಗೆ ದಾಖಲಿದ್ದರು. ಆ. 26ರಂದು ಸಂಜೆ ಮೃತಪಟ್ಟಿದ್ದಾರೆ.
ಇಂದಿನ ಪ್ರಕರಣಗಳು-33
ಇಂದು ಗುಣಮುಖ-10
ಒಟ್ಟು ಗುಣಮುಖ-1670
ಇಂದಿನ ಸಾವು-01
ಒಟ್ಟು ಸಾವು-44
ಸಕ್ರಿಯ ಪ್ರಕರಣಗಳು-473
ಒಟ್ಟು ಸೋಂಕಿತರು-2187