Advertisement

ಸೆ.17ರವರೆಗೆ ಡಿಕೆಶಿ ಕಸ್ಟಡಿಗೆ- ಡಿಕೆಶಿ ಬಳಿ 317 ಬ್ಯಾಂಕ್ ಖಾತೆ ಇದೆ; ಇ.ಡಿ.

09:45 AM Sep 14, 2019 | Team Udayavani |

ನವದೆಹಲಿ:ಅಕ್ರಮ ಆಸ್ತಿ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ.ವಶದಲ್ಲಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಮಂತ್ರಿ ಡಿಕೆ ಶಿವಕುಮಾರ್ ಗೆ  ಸೆಪ್ಟೆಂಬರ್ 17ರವರೆಗೆ ಇ.ಡಿ. ಕಸ್ಟಡಿಗೆ ಒಪ್ಪಿಸಿ ದೆಹಲಿ ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶರಾದ ಅಜಯ್ ಕುಮಾರ್ ಕುಹರ್ ಶುಕ್ರವಾರ ಆದೇಶ ನೀಡಿದ್ದಾರೆ.

Advertisement

ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಡಿಕೆ ಶಿವಕುಮಾರ್ ಅವರ ಕಸ್ಟಡಿ ಅವಧಿ ಇಂದು(ಸೆ.13) ಅಂತ್ಯಗೊಂಡ ಹಿನ್ನೆಲೆಯಲ್ಲಿ ಕೋರ್ಟ್ ಗೆ ಹಾಜರುಪಡಿಸಿದ್ದರು.

ಸೆಪ್ಟೆಂಬರ್ 16ರಂದು ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ಜಾರಿ ನಿರ್ದೇಶನಾಲಯ ಆಕ್ಷೇಪಣಾ ಅರ್ಜಿ ಸಲ್ಲಿಸಲಿದೆ.

ಅಕ್ರಮ ಆಸ್ತಿ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕಳೆದ ಹತ್ತು ದಿನಗಳಿಂದ ಡಿಕೆ ಶಿವಕುಮಾರ್ ಅವರನ್ನು ವಿಚಾರಣೆಗೊಳಪಡಿಸಿತ್ತು.

ಡಿಕೆ ಶಿವಕುಮಾರ್  ಪರ ವಕೀಲರಾದ ದಯಾನ್ ಕೃಷ್ಣನ್ ಜಾಮೀನು ನೀಡುವಂತೆ ವಾದ ಮಂಡಿಸಿದ್ದರು.

Advertisement

ಇ.ಡಿ ಪರ ವಕೀಲರ ವಾದವೇನು?

ಡಿಕೆ ಶಿವಕುಮಾರ್ ಗೆ ಸಂಬಂಧ ಪಟ್ಟ 317 ಬ್ಯಾಂಕ್ ಖಾತೆಗಳಿಂದ ವ್ಯವಹಾರ ನಡೆಸುತ್ತಿದ್ದು ಈ ಬಗ್ಗೆ ತನಿಖೆ ನಡೆಸಬೇಕಾಗಿದೆ. ಇ.ಡಿ. ಸಂಗ್ರಹಿಸಿರುವ ದಾಖಲೆಗಳಿಗೆ ಡಿಕೆ ಶಿವಕುಮಾರ್ ಉತ್ತರ ನೀಡಬೇಕಾಗಿದೆ. ಡಿಕೆಶಿ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವುದು ಇ.ಡಿ ಗಮನಕ್ಕೆ ಬಂದಿದೆ. ಅಲ್ಲದೇ ಡಿಕೆಶಿಗೆ ಮಾತ್ರವೇ ತಿಳಿದಿರುವ ಸಂಗತಿಯನ್ನು ಇ.ಡಿಗೆ ನೀಡುತ್ತಿಲ್ಲ. ಹೀಗಾಗಿ ಇನ್ನೂ ಐದು ದಿನಗಳ ಕಾಲ ವಿಚಾರಣೆ ನಡೆಸಲು ಡಿಕೆಶಿಯನ್ನು ಇ.ಡಿ. ಕಸ್ಟಡಿಗೆ ಒಪ್ಪಿಸಬೇಕೆಂದು ವಾದ ಮಂಡಿಸಿದ್ದರು.

ಮುಂದಿನ ಐದು ದಿನಗಳಲ್ಲಿ ಉತ್ತರ ನೀಡುತ್ತಾರೆಂಬ ಭಾವಿಸಿದ್ದೀರಾ? ಹಣದ ಎಲ್ಲಿಂದ ಬಂತು, ಎಲ್ಲಿಗೆ ಹೋಯ್ತು ನಂತರ ವಿಚಾರಿಸೋಣ. ಪಿಎಂಎಲ್ ಎ ಅನುಸೂಚಿತ ಅಪರಾಧಗಳನ್ನು ಮೀರಿ ಇ.ಡಿ ತನಿಖೆ ನಡೆಸಬಹುದೇ? ಈ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ನಂತರ ವಿಚಾರಣೆ ಆರಂಭವಾಗಬೇಕಿದೆ ಎಂದು ಜಡ್ಜ್ ಕುಹರ್ ಇ.ಡಿ ಪರ ವಕೀಲರನ್ನು ಪ್ರಶ್ನಿಸಿದ್ದರು.

ಡಿಕೆಶಿ ಪರ ಅಭಿಷೇಕ್ ಮನುಸಿಂಘ್ವಿ ವಾದ:

ಇಲ್ಲಿಯವರೆಗೂ ಇ.ಡಿ.ನೂರಾರು ಗಂಟೆಗಳ ಕಾಲಾವಕಾಶ ಸಿಕ್ಕಿದೆ. ಡಿಕೆಶಿ ಅನಾರೋಗ್ಯದ ಮಾಹಿತಿ ಕೋರ್ಟ್ ಗೆ ನೀಡಿದ ಸಿಂಘ್ವಿ. ಅವರ ಆರೋಗ್ಯ ಸ್ಥಿತಿಯನ್ನು ಇ.ಡಿ ಮುಚ್ಚಿಟ್ಟಿದೆ. ನಿನ್ನೆ ರಾತ್ರಿ ಡಿಕೆಶಿ ಆಸ್ಪತ್ರೆಗೆ ದಾಖಲಾಗಿದ್ದರು. ಅತೀವ ರಕ್ತದೊತ್ತಡ ಪಾರ್ಶ್ವವಾಯುಗೆ ಕಾರಣವಾಗುತ್ತದೆ. ಇಂಜೆಕ್ಷನ್ ನೀಡಿದ ಬಳಿಕವೂ ಡಿಕೆಶಿ ಬಿಪಿ 160/120ರಷ್ಟು ಇತ್ತು. ನಿನ್ನೆ ಬಿಪಿ 200/140ಕ್ಕೆ ಏರಿತ್ತು. ಕೋರ್ಟ್ ಏನಾದರೂ ಆದೇಶ ನೀಡಲಿ ಡಿಕೆಶಿ ಇವತ್ತು ಆಸ್ಪತ್ರೆಗೆ ದಾಖಲಾಗಬೇಕು ಎಂದು ಸಿಂಘ್ವಿ ಪ್ರತಿವಾದ ಮಂಡಿಸಿದ್ದರು.

ಡಿಕೆ ಶಿವಕುಮಾರ್ ತನಿಖೆಗೆ ಸಹಕರಿಸುತ್ತಿಲ್ಲ ಎಂದರೆ ಏನರ್ಥ. ಎಲ್ಲಾ ಕಡೆ ಸಿಕ್ಕ ಹಣ ಸೇರಿಸಿ 8.5 ಕೋಟಿ ಸಿಕ್ಕಿದೆ ಅಂತ ಹೇಳಿದ್ದಾರೆ. ಆದರೆ ಆರೋಪ ಬಂದಿರೋದು ಕೇವಲ 41 ಲಕ್ಷ ರೂಪಾಯಿ ಹಣದ್ದಾಗಿದೆ. ಆಂಜನೇಯ, ಸಚಿನ್ ನಾರಾಯಣ್ ಬೇರೆ, ಬೇರೆ ವ್ಯಕ್ತಿಗಳು. ಮೂವರು ಪ್ರತ್ಯೇಕವಾಗಿ ಐಟಿ ರಿಟರ್ನ್ಸ್ ಸಲ್ಲಿಸುತ್ತಿದ್ದಾರೆ. ಮತ್ತೆ ಡಿಕೆಶಿಯನ್ನು ಇ.ಡಿ ವಶಕ್ಕೆ ಒಪ್ಪಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸಿಂಘ್ವಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next