Advertisement

ಲಾಕ್‌ಡೌನ್‌: 31 ಸಾವಿರ ಕೋ.ರೂ. ಬಂಡವಾಳ ಹೂಡಿಕೆ’

01:31 AM Aug 29, 2020 | Hari Prasad |

ಬೆಂಗಳೂರು: ಲಾಕ್‌ಡೌನ್‌ ನಡುವೆಯೂ ರಾಜ್ಯದಲ್ಲಿ 31,676.57 ಕೋ.ರೂ. ಹೂಡಿಕೆ ಮಾಡಲು ವಿವಿಧ ಕಂಪೆನಿಗಳು ಮುಂದಾಗಿವೆ.

Advertisement

ಇದರಿಂದಾಗಿ 65,459 ಉದ್ಯೋಗ ಸೃಷ್ಟಿಯಾಗಲಿವೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.

ಹೊಸ ಕೈಗಾರಿಕೆ ನೀತಿ ಮತ್ತು ಕ್ರಮಗಳಿಂದ ಇಷ್ಟು ಬಂಡವಾಳ ಹರಿದು ಬಂದಿದೆ ಎಂದು ಶೆಟ್ಟರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಕೈಗಾರಿಕೆ ಅಭಿವೃದ್ಧಿಯ ಒಂದು ವರ್ಷದ ಸಾಧನೆಗಳ ಕುರಿತು ಸಿಎಂ ಬಿಎಸ್‌ವೈ ಅವರು ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಸಚಿವ ಶೆಟ್ಟರ್‌ ಮಾತನಾಡಿದರು.

ಯಡಿಯೂರಪ್ಪ ನೇತೃತ್ವದ ಒಂದು ವರ್ಷದ ಆಡಳಿತದಲ್ಲಿ ಕೈಗಾರಿಕೆ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ.

Advertisement

ಸೂಕ್ಷ್ಮ, ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಸರಳ ನಿಯಮಗಳ ಕಾನೂನು ಜಾರಿಗೊಳಿಸಲಾಗಿದೆ ಎಂದರು.

ಭಾರತ್‌ ಗೋಲ್ಡ್‌ ಮೈನ್ಸ್‌ ಲಿ. (ಬಿಜಿಎಂಎಲ್‌) ವ್ಯಾಪ್ತಿಯಲ್ಲಿ ಬಳಕೆ ಆಗದೆ ಉಳಿದಿರುವ 3,200 ಎಕರೆ ಜಮೀನು ಬಿಟ್ಟುಕೊಡಲು ಕೇಂದ್ರ ಸರಕಾರ ಸ್ಪಂದಿಸಿದ್ದು ಆ ಭಾಗದಲ್ಲಿ ಕೈಗಾರಿಕೆ ಪಾರ್ಕ್‌ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಚಿವ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next