Advertisement

Kashmir; ಈ ವರ್ಷ ಜಂಟಿ ಕಾರ್ಯಾಚರಣೆಯಲ್ಲಿ 31 ಭಯೋತ್ಪಾದಕರ ಅಂತ್ಯ

04:23 PM Sep 28, 2023 | Team Udayavani |

ಶ್ರೀನಗರ : ಯಶಸ್ವಿ ಜಂಟಿ ಕಾರ್ಯಾಚರಣೆಗಳ ಗಳಲ್ಲಿ 2023 ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಒಟ್ಟು 31 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಘಟಿತ ಪ್ರಯತ್ನಗಳು ಕೇಂದ್ರಾಡಳಿತ ಪ್ರದೇಶದ ವಿವಿಧ ಸ್ಥಳಗಳಲ್ಲಿ BSF, ಪೊಲೀಸ್, SSB ಮತ್ತು CRPF ಪಡೆಗಳು ಕಾರ್ಯಾಚರಣೆ ನಡೆಸಿದ್ದವು.

Advertisement

ಈ ಜಂಟಿ ಕಾರ್ಯಾಚರಣೆಗಳ ಸಮಗ್ರ ವಿವರವನ್ನು ನೀಡಿದ ಜೆ & ಕೆ ಹಿರಿಯ ಪೋಲೀಸ್ ಅಧಿಕಾರಿ ಪೊಲೀಸ್, ಈ ತಿಂಗಳ ಆರಂಭದಲ್ಲಿ, ಕೋಕರ್‌ನಾಗ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಉನ್ನತ ಉಗ್ರ ಕಮಾಂಡರ್ ಉಜಿರ್ ಖಾನ್ ಸೇರಿದಂತೆ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಕಣಿವೆಯಲ್ಲಿ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ, ಇದು ಸುಮಾರು 7 ದಿನಗಳವರೆಗೆ ನಡೆದಿದ್ದು, ಆರ್ಮಿ ಕರ್ನಲ್, ಯೋಧ ಮತ್ತು ಪೋಲಿಸ್ ಉಪ ಅಧೀಕ್ಷಕ ಸೇರಿ ಮೂವರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.

ಜೆ & ಕೆ ಕೇಂದ್ರಾಡಳಿತ ಪ್ರದೇಶದಲ್ಲಿ ಇದುವರೆಗೆ ಒಟ್ಟು 47 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದು, ಈ ವರ್ಷ ಸೆಪ್ಟೆಂಬರ್ 26 ರ ವೇಳೆಗೆ 204 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ವರದಿ ಮಾಡಿವೆ. ಅಂಕಿಅಂಶಗಳು ಜನವರಿ 1 ಮತ್ತು ಜನವರಿ 26, 2023 ರ ನಡುವೆ 47 ಮಂದಿಯಲ್ಲಿ 38 ವಿದೇಶಿ ಭಯೋತ್ಪಾದಕರು ಮತ್ತು ಒಂಬತ್ತು ಸ್ಥಳೀಯ ಉಗ್ರಗಾಮಿಗಳು ಎಂದು ವಿವರ ಬಹಿರಂಗಪಡಿಸಲಾಗಿದೆ. 2022 ರಲ್ಲಿ 187 ಉಗ್ರರನ್ನು ಹೊಡೆದುರುಳಿಸಲಾಗಿತ್ತು. 57 ವಿದೇಶಿ ಭಯೋತ್ಪಾದಕರು ಮತ್ತು 130 ಸ್ಥಳೀಯರಾಗಿದ್ದರು.

ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರದಲ್ಲಿ 111 ಸಕ್ರಿಯ ಭಯೋತ್ಪಾದಕರು ನೆಲೆಸಿದ್ದಾರೆ, 71 ವಿದೇಶಿ ಮತ್ತು 40 ಸ್ಥಳೀಯರು, ಕಳೆದ ವರ್ಷ ದಾಖಲಾದ 137 ಸಕ್ರಿಯ ಭಯೋತ್ಪಾದಕರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next