ಮುಂಬೈ: ಇಲ್ಲಿನ ವರ್ಲಿ ಪ್ರದೇಶದ ಸುಮಾರು 3000 ಶಿವಸೇನೆ ಸದಸ್ಯರು ಭಾನುವಾರ ಏಕನಾಥ್ ಶಿಂಧೆ ಬಣವನ್ನು ಸೇರಿದ್ದು, ಉದ್ಧವ್ ಠಾಕ್ರೆಗೆ ದೊಡ್ಡ ಹೊಡೆತ ಸಿಕ್ಕಿದೆ.
ಮುಂಬೈನ ವರ್ಲಿ ಪ್ರದೇಶದಲ್ಲಿ ಆದಿತ್ಯ ಠಾಕ್ರೆ ಶಾಸಕರಾಗಿರುವ ಕಾರಣ ಪಕ್ಷದ ಸದಸ್ಯರ ನಿರ್ಧಾರವು ಠಾಕ್ರೆ ಬಣಕ್ಕೆ ದೊಡ್ಡ ನಿರಾಶೆಯನ್ನುಂಟು ಮಾಡಿದೆ.
ದಸರಾ ರ್ಯಾಲಿ ನಡೆಸಲು ಎರಡು ಬಣಗಳು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (ಬಿಎಂಸಿ) ಪ್ರತ್ಯೇಕ ಪತ್ರಗಳನ್ನು ಸಲ್ಲಿಸಿದ್ದವು. ಆದಾಗ್ಯೂ, ಕಾನೂನು ಮತ್ತು ಸುವ್ಯವಸ್ಥೆಯ ಕಾಳಜಿಯನ್ನು ಉಲ್ಲೇಖಿಸಿ ಮುಂಬೈ ನಾಗರಿಕ ಸಂಸ್ಥೆ ಎರಡೂ ಬಣಗಳಿಗೆ ಅನುಮತಿ ನಿರಾಕರಿಸಿದೆ.
ಇದನ್ನೂ ಓದಿ:ಕಡಿಯಾಳಿಯಲ್ಲಿ “ಉಡುಪಿ ದಾಂಡಿಯಾ-2022′ ಸಂಪನ್ನ
ಬಿಎಂಸಿ ಅನುಮತಿ ನಿರಾಕರಿಸಿದ ಮರುದಿನವೇ, ಬಾಂಬೆ ಹೈಕೋರ್ಟ್ ಉದ್ಧವ್ ಠಾಕ್ರೆ ಬಣಕ್ಕೆ ಅಕ್ಟೋಬರ್ 2 ಮತ್ತು ಅಕ್ಟೋಬರ್ 6 ರ ನಡುವೆ ರ್ಯಾಲಿ ನಡೆಸಲು ಅನುಮತಿ ನೀಡಿದೆ. ಇದಾದ ಮರು ದಿನವೇ 3000 ಮಂದಿ ಶಿವಸೇನೆ ಸದಸ್ಯರು ಏಕನಾಥ್ ಶಿಂಧೆ ಬಣ ಸೇರಿದ್ದಾರೆ.