Advertisement

300 ರೂ. ಗಡಿ ದಾಟಿದ ಹೊಸ ಅಡಿಕೆ ಧಾರಣೆ

10:00 AM Jun 01, 2020 | mahesh |

ಸುಳ್ಯ/ಪುತ್ತೂರು: ಮೇ ಮೊದಲ ವಾರದಿಂದಲೇ ಏರುಮುಖದಲ್ಲಿರುವ ಹೊಸ ಅಡಿಕೆ ಧಾರಣೆ ಮೇ ಅಂತ್ಯಕ್ಕೆ 300 ರೂ. ಗಡಿ ದಾಟಿದೆ. ಮಾರುಕಟ್ಟೆಯಲ್ಲಿ ಖರೀದಿಗೆ ಪೈಪೋಟಿ ಕಂಡು ಬರುತ್ತಿದ್ದು, ಧಾರಣೆ ಇನ್ನಷ್ಟು ಹೆಚ್ಚವಾಗುವ ನಿರೀಕ್ಷೆ ಇದೆ.ಅ ಅಂತಾರಾಜ್ಯ ಸಂಚಾರಕ್ಕೆ ಕೇಂದ್ರ ಸರಕಾರ ಗ್ರೀನ್‌ ಸಿಗ್ನಲ್‌ ನೀಡಿರುವ ಕಾರಣ ಪೂರೈಕೆ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದ್ದು, ಮತ್ತಷ್ಟು ಬೇಡಿಕೆ ಕಂಡು ಬರುವ ಸಾಧ್ಯತೆ ಕೂಡ ಇದೆ.

Advertisement

ಬೇಡಿಕೆ ಹೆಚ್ಚಳ
ಉತ್ತರ ಭಾರತದ ರಾಜ್ಯಗಳಿಗೆ ಎರಡು ತಿಂಗಳಿನಿಂದ ಅಡಿಕೆ ಪೂರೈಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಪರಿ ಣಾಮ ಅಲ್ಲಿ ಅಡಿಕೆ ಉತ್ಪನ್ನ ತಯಾರಿಕೆಗೂ ಹೊಡೆತ ಬಿದ್ದಿದೆ. ಹೀಗಾಗಿ ಅಡಿಕೆಗೆ ಬೇಡಿಕೆ ಕುದುರುವ ಎಲ್ಲ ಲಕ್ಷಣಗಳಿವೆ.

300 ರೂ. ಧಾರಣೆ
ಮೇ 30ರಂದು ಬೆಳ್ಳಾರೆ ಹೊರ ಮಾರು ಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 300 ರೂ.ಗೆ ಖರೀದಿ ಆಗಿದೆ. ಇನ್ನೂ ಕೆಲವೆಡೆ 300ಕ್ಕೂ ಹೆಚ್ಚು ಧಾರಣೆಗೆ ಖರೀದಿಸಿರುವ ಮಾಹಿತಿ ಇದೆ. ಮೇ 4ರಂದು ಸುಳ್ಯ, ಪುತ್ತೂರು ಮಾರುಕಟ್ಟೆಗಳಲ್ಲಿ ಹೊಸ ಅಡಿಕೆ ಧಾರಣೆೆ 265 ರೂ. ಇತ್ತು. ಮೇ 7ರಂದು ಬೆಳ್ಳಾರೆ ಮಾರುಕಟ್ಟೆಯಲ್ಲಿ ಧಾರಣೆ 280 ರೂ.ಗೆ ಖರೀದಿ ಆಗಿತ್ತು.

ಏರಿದ ಧಾರಣೆ
2015ರಲ್ಲಿ ಕೆ.ಜಿ. ಹೊಸ ಅಡಿಕೆಗೆ 200 ರೂ., 2016ರಲ್ಲಿ 250 ರೂ., 2017ರಲ್ಲಿ 180 ರೂ., 2018ರಲ್ಲಿ 220 ರೂ. ಆಸುಪಾಸಿನಲ್ಲಿತ್ತು. 2018ರ 210-220 ರೂ. ವರೆಗೆ ಏರಿತ್ತು. 2019ರ ಆರಂಭದಿಂದ 242 ರೂ. ನಲ್ಲಿ ವ್ಯವಹರಿಸಿತ್ತು. 2020ರ ಮೇ ತಿಂಗಳಲ್ಲಿ ಹೊಸ ಅಡಿಕೆ 300-302 ರೂ., ಹಳೆ ಅಡಿಕೆ 305-310 ರೂ.ನಲ್ಲಿ ಖರೀದಿ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next