Advertisement

lightning ಪ್ರತೀ ನಿಮಿಷಕ್ಕೆ 300 ಮಿಂಚು!

01:40 AM Sep 05, 2023 | Team Udayavani |

ಮಣಿಪಾಲ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಮೇಘ ಸ್ಫೋಟ, ಪ್ರವಾಹಗಳ ರೌದ್ರಾವತಾರದ ನೆನಪು ಇನ್ನೂ ಹಸುರಾಗಿರುವಾಗಲೇ ನೆರೆಯ ಒಡಿಶಾದ ವಿವಿಧ ಭಾಗಗಳಲ್ಲಿ ಶನಿವಾರ ಒಂದೇ ದಿನ ಕೆಲವೇ ತಾಸುಗಳ ಅವಧಿಯಲ್ಲಿ ಸಿಡಿಲು ಬಡಿದು 12 ಮಂದಿ ಮೃತಪಟ್ಟಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ.

Advertisement

ವಿವಿಧ ಮೂಲಗಳ ಪ್ರಕಾರ, ಶನಿವಾರ ಅಪರಾಹ್ನ 2ರಿಂದ 3 ತಾಸುಗಳ ಅವಧಿಯಲ್ಲಿ 61 ಸಾವಿರಕ್ಕೂ ಅಧಿಕ ಮಿಂಚುಗಳು ಎರಗಿವೆ. ಅಂದರೆ ಪ್ರತೀ ನಿಮಿಷಕ್ಕೆ ಸುಮಾರು 300ಕ್ಕಿಂತಲೂ ಹೆಚ್ಚು ಬಾರಿ!

ಆಗಸ್ಟ್‌ ಆರಂಭದಿಂದೀಚೆಗೆ ದೇಶಾದ್ಯಂತ ಮುಂಗಾರು ನಿದ್ದೆ ಹೋದ ಸ್ಥಿತಿಯಲ್ಲಿತ್ತು. ಕಳೆದ ವಾರಾಂತ್ಯದಲ್ಲಿ ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದಂತಹ ಚಲನೆಯಿಂದ ಮುಂಗಾರು ಎಚ್ಚರಗೊಂಡಿದೆ. ಅದಾಗಷ್ಟೆ ನಿದ್ದೆಯಿಂದ ತಟ್ಟಿ ಎಬ್ಬಿಸಿದ ಯಾರೇ ಆದರೂ ಹೌಹಾರುವುದು, ಸಿಟ್ಟಾಗುವುದು ಸಹಜ ತಾನೇ! ಶನಿವಾರದ ಅಟಾಟೋಪಕ್ಕೂ ಇದೇ ಕಾರಣ!

ಇಲ್ಲಿಗೆ ನಿಲ್ಲದು
ಮುಂಗಾರಿನ ಈ ಆಕ್ರೋಶ ಸದ್ಯಕ್ಕೆ ವಿರಾಮ ಕಾಣದು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿರುವ ಮಾಹಿತಿಯ ಪ್ರಕಾರ, ಬಂಗಾಲಕೊಲ್ಲಿಯ ಉತ್ತರ ಭಾಗದಲ್ಲಿ ಕೇಂದ್ರಿತವಾಗಿರುವ ದೊಡ್ಡ ಮಟ್ಟದ ಚಂಡಮಾರುತದಂತಹ ಚಲನೆ ಹಾಗೂ ಅದರ ಜತೆಗೆ ಅಸ್ತಿತ್ವದಲ್ಲಿರುವ ಸಣ್ಣ ಪುಟ್ಟ ನಿಮ್ನ ಒತ್ತಡಗಳು ಮತ್ತು ಸುಳಿಗಾಳಿಗಳು ಮುಂಗಾರನ್ನು ಇನ್ನಷ್ಟು ಬಡಿದೆಬ್ಬಿಸಲಿವೆ.

ಹವಾಮಾನ ಬದಲಾವಣೆ ಕಾರಣ
ಭುವನೇಶ್ವರ ಹವಾಮಾನ ಇಲಾಖೆಯ ವಿಜ್ಞಾನಿ ಉಮಾಶಂಕರ ದಾಸ್‌ ಹೇಳುವಂತೆ ಒಡಿಶಾದಲ್ಲಿ ಸಿಡಿಲು ಮಿಂಚಿನ ಆರ್ಭಟಕ್ಕೆ ಜಾಗತಿಕ ಹವಾಮಾನ ಬದಲಾವಣೆಯೂ ಕಾರಣ. ವಾತಾವರಣ ತೀರಾ ಬಿಸಿಯಾಗಿದ್ದಾಗ ಮತ್ತು ಗಾಳಿಯಲ್ಲಿ ಹೆಚ್ಚು ನೀರಿನಂಶ ಇರುವಾಗ ಮಿಂಚು ಹೆಚ್ಚು. ಆಗಾಗ ಶಾಖದಲೆಗಳು ಹಾಗೂ ಬಂಗಾಲಕೊಲ್ಲಿಯಿಂದ ತೇವಾಂಶ ಬೀಸುವು ದರಿಂದ ಒಡಿಶಾದಲ್ಲಿ ಸಿಡಿಲು-ಮಿಂಚು ಹೆಚ್ಚು ಎಂದು ದಾಸ್‌ ವಿವರಿಸಿದ್ದಾರೆ.

Advertisement

ದೇಶಾದ್ಯಂತ ಹೆಚ್ಚಳ
ಭೂಮಿ ಬಿಸಿಯೇರುವಿಕೆ ಮತ್ತಿತರ ಹವಾಮಾನ ಬದ ಲಾವಣೆಗಳಿಂದ ಕಳೆದ 4 ವರ್ಷಗಳಲ್ಲಿ ದೇಶಾದ್ಯಂತ ಸಿಡಿಲು- ಮಿಂಚಿನ ಹಾವಳಿ ತೀವ್ರವಾಗಿ ಏರಿದೆ ಎಂದು ಪುಣೆಯಲ್ಲಿ ಇರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟ್ರೋಪಿಕಲ್‌ ಮ್ಯಾನೇಜ್‌ಮೆಂಟ್‌ನ ಅಂಕಿಅಂಶಗಳು ತಿಳಿಸಿವೆ.

-ಮೋಡದಿಂದ ಭೂಮಿಗೆ ಮಿಂಚು ಅಪ್ಪಳಿಸಿದಾಗ ಅತೀ ಹೆಚ್ಚು ಹಾನಿ, ಇಂತಹ ಪ್ರಕರಣಗಳಲ್ಲಿ ಏರಿಕೆ
-ಕಳೆದ 4 ವರ್ಷಗಳಲ್ಲಿ ಸಿಡಿಲಿನ ಆಘಾತ ಶೇ. 53 ಹೆಚ್ಚಳ

2021-22
281 ಮಂದಿ
ಒಡಿಶಾದ 30 ಜಿಲ್ಲೆಗಳಲ್ಲಿ ಸಿಡಿಲು-ಮಿಂಚಿನಿಂದ ಸಾವಿ ಗೀಡಾದವರು

3790 ಮಂದಿ
ಕಳೆದ 11 ವರ್ಷ ಗಳಲ್ಲಿ ಒಡಿಶಾದಲ್ಲಿ ಸಿಡಿಲಿನಿಂದ ಮೃತಪಟ್ಟವರು

Advertisement

Udayavani is now on Telegram. Click here to join our channel and stay updated with the latest news.

Next