ಜೇವರ್ಗಿ: ರೈತರು, ಮಹಿಳೆಯರ ಅಭಿವೃದ್ಧಿಗಾಗಿ ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದ ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು. ತಾಲೂಕಿನ ನೆಲೋಗಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಬಳಿ ಡಿಸಿಸಿ ಬ್ಯಾಂಕ್ ವತಿಯಿಂದ ಬಡ್ಡಿ ರಹಿತ ಸಾಲ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಆರು ತಿಂಗಳಲ್ಲಿ ನಾಲ್ಕು ಲಕ್ಷ ರೈತರಿಗೆ 300ಕೋಟಿ ರೂ.ಗಳನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಸಾಲ ವಿತರಿಸಲಾಗಿದೆ. ಅಲ್ಲದೇ ಒಟ್ಟು ಸಾವಿರ ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿದೆ. ನೆಲೋಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ 150 ರೈತರಿಗೆ 52 ಲಕ್ಷ ರೂ. ಬಡ್ಡಿ ರಹಿತ ಸಾಲ ವಿತರಿಸಲಾಗಿದೆ. ರೈತರು ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾಗುತ್ತಿರುವ ಸಾಲಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳ
ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ನೆಲೋಗಿ ವಿರಕ್ತಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೆಲೋಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈಲಪ್ಪ ನೇದಲಗಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ನಿಂಗಣ್ಣ ದೊಡ್ಡಮನಿ ಗಂವ್ಹಾರ, ಮುಖಂಡರಾದ ಧರ್ಮಣ್ಣ ದೊಡ್ಡಮನಿ, ರಮೇಶಬಾಬು ವಕೀಲ, ಶೋಭಾ ಬಾಣಿ, ನೆಲೋಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮಾಣಿಕಮ್ಮ ಕನ್ನೊಳ್ಳಿ, ಉಪಾಧ್ಯಕ್ಷ ಬಾಬುಗೌಡ ವಿಭೂತಿ, ಭೀಮರಾವ್ ಗುಜಗೊಂಡ, ದೀಪಕ್‌ನಾಥ, ಸೋಮಶೇಖರ ಹೂಗಾರ, ಸಿದ್ಧಣ್ಣ ಬಂಗಾರಿ, ಭಗವಂತರಾಯ ಗುಜಗೊಂಡ, ಶಿವಕುಮಾರಗುಜಗೊಂಡ,ಭಗವಂತರಾಯಚೌಡಾಪುರ ಚಂದ್ರಕಾಂತ ಗುಜಗೊಂಡ, ಕಲ್ಯಾಣಿ ಮಂಗಾ,ಧರ್ಮರಾಯ ಝಳಕಿ, ದೇವರಾಯ ಯಂಕಂಚಿ ಹಾಗೂ ನೆಲೋಗಿ ಗ್ರಾಮದ ರೈತರು, ರೈತ ಮಹಿಳೆಯರು ಸಾಲ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.