Advertisement

ಅಮೆರಿಕದ 30 ವರ್ಷದ ಹಳೆಯ ಚರ್ಚ್ ಇನ್ಮುಂದೆ ಸ್ವಾಮಿ ನಾರಾಯಣ ದೇಗುಲ!

06:26 PM Dec 24, 2018 | Team Udayavani |

ವಾಷಿಂಗ್ಟನ್:ಅಮೆರಿಕದ ವರ್ಜಿನಿಯಾದಲ್ಲಿರುವ 30 ವರ್ಷ ಹಳೆಯದಾದ ಚರ್ಚ್ ಅನ್ನು ಸ್ವಾಮಿ ನಾರಾಯಣ ಹಿಂದೂ ದೇವಸ್ಥಾನವನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆಯಂತೆ. ಚರ್ಚ್ ಅನ್ನು ದೇವಾಲಯವನ್ನಾಗಿ ಮಾಡುವ ಕೆಲಸ ಭರದಿಂದ ಸಾಗಿದ್ದು, ಶೀಘ್ರದಲ್ಲಿಯೇ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ವರದಿ ತಿಳಿಸಿದೆ.

Advertisement

ಈಗಾಗಲೇ ಅಮೆರಿಕದಲ್ಲಿ 5 ಹಾಗೂ ದೇಶಾದ್ಯಂತ 9 ಚರ್ಚ್ ಗಳನ್ನು ದೇವಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಅಹಮ್ಮದಾಬಾದ್ ನಲ್ಲಿರುವ ಸ್ವಾಮಿ ನಾರಾಯಣಾ ಗಡಿ ಸಂಸ್ಥಾನ ಈ ಕಾರ್ಯ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

ಅಮೆರಿಕದ ವರ್ಜಿನಿಯಾ, ಕ್ಯಾಲಿಫೋರ್ನಿಯಾ, ಲ್ಯೂಸೆವಿಲ್ಲೆ, ಪೆನ್ನೆಸ್ಲುವೆನಿಯಾ, ಲಾಸ್ ಏಂಜಲೀಸ್ ಮತ್ತು ಓಹಿಯೋದಲ್ಲಿನ ಚರ್ಚ್ ಗಳನ್ನು ದೇವಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಅದೇ ರೀತಿ ಯುನೈಟೆಡ್ ಕಿಂಗ್ ಡಮ್ ನಲ್ಲಿ ಎರಡು ಚರ್ಚ್ ಗಳನ್ನು ದೇವಾಲಯವನ್ನಾಗಿ ಮಾಡಲಾಗಿದೆ ಎಂದು ಹೇಳಿದೆ.

Advertisement

ಸಂಸ್ಥಾನದ ಮಹಾಂತ್ ಭಗವದ್ ಪ್ರಿಯದಾಸ್ ಸ್ವಾಮಿ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ, ಸಂಸ್ಥಾನದ ಧಾರ್ಮಿಕ ಮುಖ್ಯಸ್ಥ ಪುರುಷೋತ್ತಮಪ್ರಿಯದಾಸ್ ಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಸುಮಾರು 30 ವರ್ಷಗಳ ಹಳೆಯ ಚರ್ಚ್ ಅನ್ನು ಸ್ವಾಧೀನಕ್ಕೆ ತೆಗೆದುಕೊಂಡು ಸ್ವಾಮಿನಾರಾಯಣ ದೇಗುಲವನ್ನಾಗಿ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next