ತಮಿಳುನಾಡು: ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾದ ಪರಿಣಾಮ ಒಡಿಶಾದ 16 ವಲಸೆ ಕಾರ್ಮಿಕರು ಸೇರಿದಂತೆ ಸುಮಾರು 30 ಮಂದಿ ಮಹಿಳೆಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಮಿಳುನಾಡಿನ ತೂತುಕುಡಿಯ ಪುದೂರ್ ಪಾಂಡಿಯ ಪುರಂ ಪ್ರದೇಶದಲ್ಲಿ ಶನಿವಾರ ಸಂಭವಿಸಿದೆ.
ಶುಕ್ರವಾರ ತಡರಾತ್ರಿ ನಡೆದಿದ್ದು ಅನಿಲ ಸೋರಿಕೆಯಾಗುತ್ತಿದ್ದಂತೆ ಮಹಿಳೆಯರು ಅಸ್ವಸ್ಥಗೊಂಡು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದಾರೆ ಕೂಡಲೇ ಕಾರ್ಮಿಕರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೀನು ಸಂಸ್ಕರಣ ಘಟಕದಲ್ಲಿ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ಮಾಡುತ್ತಿದ್ದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಮೋನಿಯಾ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಘಟಕದ ಸುತ್ತ ಹಬ್ಬಿದ ಪರಿಣಾಮ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
ಈ ಘಟಕದಲ್ಲಿ ಈ ಹಿಂದೆ 2014ರಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆಯಾಗಿ 50 ಮಂದಿ ಅಸ್ವಸ್ಥರಾಗಿದ್ದರು ಎನ್ನಲಾಗಿದ್ದು, ತಾಳಮುತ್ತು ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Mumbai: ಭಾರಿ ಮಳೆಗೆ ಕಟ್ಟಡ ಭಾಗ ಕುಸಿತ… ಮಹಿಳೆ ಮೃತ್ಯು, ಕಟ್ಟದಲ್ಲಿದ್ದವರ ರಕ್ಷಣೆ