Advertisement

ಎಸೆಸೆಲ್ಸಿ : ಶೇ. 30ರಷ್ಟು ಪಠ್ಯ ಕಡಿತ : ಮಂಗಳೂರಿನಲ್ಲಿ ಸಚಿವ ಸುರೇಶ್‌ ಕುಮಾರ್‌ ಹೇಳಿಕೆ

03:53 AM Feb 28, 2021 | Team Udayavani |

ಮಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಗೆ ಶೇ. 70ರಷ್ಟು ಪಠ್ಯಕ್ರಮ ಮಾತ್ರ ಇರಲಿದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

Advertisement

ಎಸೆಸೆಲ್ಸಿ ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗಳು, ಹೆತ್ತವರು ಆತಂಕಪಡುವ ಅಗತ್ಯವಿಲ್ಲ. ಅಗತ್ಯವಾದ, ಮುಂದಿನ ಶಿಕ್ಷಣಕ್ಕೆ ನಿರ್ಣಾಯಕವಾದ ಪಠ್ಯ ವಿಷಯಗಳನ್ನು ಪರೀಕ್ಷೆಗೆ ಇರಿಸಿರುವ ಶೇ. 70 ಭಾಗದಲ್ಲಿ ಸೇರಿಸಲಾಗಿದೆ. ಈ ವಿಚಾರವಾಗಿ ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು, ಪೋಷಕರ ಜತೆ ಈಗಾಗಲೇ ಚರ್ಚಿಸಿದ್ದೇನೆ ಎಂದರು.

ಶುಲ್ಕ ಕಡಿತ: ಶೀಘ್ರ ಪರಿಹಾರ ಸೂತ್ರ

ಕೊರೊನಾದಿಂದಾಗಿ ಈ ವರ್ಷ ಅನೇಕ ಹೆತ್ತವರು ಶುಲ್ಕ ಪಾವತಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈ ಸಮಸ್ಯೆಗೆ ಹೆತ್ತವರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯವರು ಪರಸ್ಪರ ಸಮಾಲೋಚನೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕಿತ್ತು. ಇದು ನಡೆಯದ ಕಾರಣ ಸರಕಾರ ಶುಲ್ಕ ಕಡಿತದ ತೀರ್ಮಾನ ತೆಗೆದುಕೊಳ್ಳಬೇಕಾಯಿತು. ಶೇ. 30 ಶುಲ್ಕ ಕಡಿತಗೊಳಿಸಿರುವ ಸರಕಾರದ ನಿರ್ಧಾರದ ವಿರುದ್ಧ ಖಾಸಗಿ ಶಾಲೆಯವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಶುಲ್ಕ ರಿಯಾಯಿತಿ ಸಂಬಂಧಿಸಿದ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರ ಸೂತ್ರವೊಂದನ್ನು ಕಂಡು ಹಿಡಿಯುತ್ತೇವೆ. ಈಗಾಗಲೇ ಆಗಿರುವ ಪೂರ್ಣ ಶುಲ್ಕ ಪಾವತಿಯನ್ನು ಮುಂದಿನ ವರ್ಷದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು. ಕೇರಳದಿಂದ ಕರ್ನಾಟಕಕ್ಕೆ ಪ್ರವೇಶ ನಿರ್ಬಂಧದ ಬಗ್ಗೆ ಪ್ರತಿಕ್ರಿಯಿಸಿ, ಇಲ್ಲಿನ ಪರಿಸ್ಥಿತಿ ಬಗ್ಗೆ ಸ್ಥಳೀಯ ಅಧಿ ಕಾರಿ ಗಳ ಜತೆ ಮಾತ ನಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next